ಶುಕ್ರವಾರ, ಏಪ್ರಿಲ್ 23, 2021
30 °C

ಅಂಬಾನಿ ನಿವಾಸದ ಬಳಿ ಸ್ಫೋಟಕ ಪ್ರಕರಣ: ಎನ್‌ಐಎ ಮುಂದೆ ಪರಮ್‌ ಬೀರ್‌ ಸಿಂಗ್ ಹಾಜರು

ಪಿಟಿಐ‌ Updated:

ಅಕ್ಷರ ಗಾತ್ರ : | |

ಮುಂಬೈ: ಉದ್ಯಮಿ ಮುಕೇಶ್‌ ಅಂಬಾನಿ ಅವರ ನಿವಾಸದ ಬಳಿ ಸ್ಫೋಟಕಗಳಿದ್ದ ಕಾರು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಮುಂಬೈನ ಮಾಜಿ ಪೊಲೀಸ್‌ ಕಮಿಷನರ್ ಪರಮ್‌ಬೀರ್‌ ಸಿಂಗ್‌ ಬುಧವಾರ ಎನ್‌ಐಎ ಮುಂದೆ ಹಾಜರಾದರು.

ದಕ್ಷಿಣ ಮುಂಬೈನಲ್ಲಿರುವ ಎನ್‌ಐಎ ಕಚೇರಿಗೆ ತೆರಳಿದ ಸಿಂಗ್‌ ಅವರು, ತಮ್ಮ ಹೇಳಿಕೆ ದಾಖಲಿಸಿದ್ದಾರೆ.

ಫೆ. 25ರಂದು ಅಂಬಾನಿ ನಿವಾಸದ ಬಳಿ ಸ್ಫೋಟಕಗಳಿದ್ದ ವಾಹನ ಪತ್ತೆಯಾಗಿತ್ತು. ಕೆಲ ದಿನಗಳ ನಂತರ ಠಾಣೆ ಮೂಲದ ಉದ್ಯಮಿ ಮನ್‌ಸುಖ್‌ ಹಿರೆನ್‌ ಅವರ ಹತ್ಯೆಯಾಗಿತ್ತು. ಈ ಘಟನೆ ನಂತರ ಪರಮ್‌ಬೀರ್‌ ಸಿಂಗ್‌ ಅವರನ್ನು ಮುಂಬೈ ಪೊಲೀಸ್‌ ಕಮಿಷನರ್‌ ಹುದ್ದೆಯಿಂದ ಕೆಳಗಿಳಿಸಲಾಯಿತು.

ಸದ್ಯ ಅವರು ಹೋಮ್‌ ಗಾರ್ಡ್ಸ್‌ನ ಮಹಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು