ಗುರುವಾರ , ಅಕ್ಟೋಬರ್ 1, 2020
20 °C

ಲಖನೌ: ಎನ್‌ಕೌಂಟರ್‌ನಲ್ಲಿ ಅನ್ಸಾರಿ ಸಹಚರನ ಹತ್ಯೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಖನೌ: ನಗರದಲ್ಲಿ ಭಾನುವಾರ ಉತ್ತರ ಪ್ರದೇಶದ ವಿಶೇಷ ಕಾರ್ಯ ಪಡೆ (ಎಸ್‌ಟಿಎಫ್‌) ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಪಾತಕಿ ಹಾಗೂ ರಾಜಕಾರಣಿ ಮುಖ್ತಾರ್‌ ಅನ್ಸಾರಿ ಸಹಚರನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ರಾಕೇಶ್‌ ಪಾಂಡೆ ಅಲಿಯಾಸ್‌ ಹನುಮಾನ್‌ ಪಾಂಡೆ ಎಂಬಾತನನ್ನು ಇಲ್ಲಿನ ಸರೋಜಿನಿನಗರದಲ್ಲಿ ಹೊಡೆದುರುಳಿಸಲಾಗಿದೆ. ಅನ್ಸಾರಿ ಮತ್ತು ಮುನ್ನಾ ಭಜರಂಗಿ ಸಹಚರನಾಗಿದ್ದ ಪಾಂಡೆ ಶಾರ್ಪ್‌ ಶೂಟರ್‌ ಆಗಿದ್ದ.

ಮುಖ್ತಾರ್‌ ಅನ್ಸಾರಿ 2005ರ ನವೆಂಬರ್‌ 29ರಂದು ನಡೆದ ಬಿಜೆಪಿಯ ಮೊಹಮ್ಮದಾಬಾದ್‌ ಕ್ಷೇತ್ರದ ಶಾಸಕ ಕೃಷ್ಣಾನಂದ ರಾಯ್‌ ಹತ್ಯೆ ಪ್ರಕರಣದ ಪ್ರಮುಖ ಆರೋಪಿ. ಹತ್ಯೆಯಾಗಿರುವ ರಾಕೇಶ್‌ ತಲೆಗೆ ₹ 50,000 ಬಹುಮಾನ ಘೋಷಿಸಲಾಗಿತ್ತು.

‘ಸರೋಜಿನಿನಗರದಲ್ಲಿ ಬೆಳಗಿನ ಜಾವ ನಡೆದ ಎನ್‌ಕೌಂಟರ್‌ನಲ್ಲಿ ಗಾಯಗೊಂಡಿದ್ದ ಪಾಂಡೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ’ ಎಂದು ಎಸ್‌ಟಿಎಫ್‌ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು