ಬುಧವಾರ, ಅಕ್ಟೋಬರ್ 20, 2021
29 °C

ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ: ಎಸ್‌.ನಟರಾಜ್‌ ಬೂದಾಳು ಕೃತಿ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಶೋಧಕ ಎಸ್.ನಟರಾಜ ಬೂದಾಳು

ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯು ಅನುವಾದಿತ ಕೃತಿಗೆ ನೀಡಲಾಗುವ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಚಿಂತಕ, ಸಂಶೋಧಕ ಎಸ್.ನಟರಾಜ ಬೂದಾಳು ಅವರ ‘ಸರಹಪಾದ’ ಕೃತಿ ಕನ್ನಡ ವಿಭಾಗದಿಂದ ಆಯ್ಕೆಯಾಗಿದೆ.

ನಿವೃತ್ತ ಪ್ರಾಧ್ಯಾಪಕರಾಗಿರುವ ನಟರಾಜ್‌ ಬೂದಾಳು ಅವರು, ಸಿದ್ಧ ಪರಂಪರೆಯ ಪ್ರಮುಖರಲ್ಲಿ ಒಬ್ಬರಾದ ಸರಹಪಾದನ ದೋಹೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಚಂದ್ರಕಾಂತ ಪೋಕಳೆ, ಲಕ್ಷ್ಮೀ ಚಂದ್ರಶೇಖರ್ ಹಾಗೂ ಓ.ಎಲ್‌. ನಾಗಭೂಷಣ ಸ್ವಾಮಿ ಅವರು ಕನ್ನಡ ವಿಭಾಗದ ತೀರ್ಪುಗಾರರಾಗಿದ್ದರು.

ಕಂಬಾರ, ಪೈ ಕೃತಿಗಳಿಗೂ ಪ್ರಶಸ್ತಿ: ಅಕಾಡೆಮಿಯ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಅವರ ‘ಶಿಖರ ಸೂರ್ಯ’ ಕೃತಿಯ ಮಲಯಾಳಂ ಅನುವಾದ ‘ಶಿಖರಸೂರ್ಯನ್‌’ (ಲೇಖಕ: ಸುಧಾಕರನ್‌ ರಾಮಂಥಲಿ) ಪ್ರಶಸ್ತಿಗೆ ಆಯ್ಕಯಾಗಿದೆ.

ಇಂಗ್ಲಿಷ್‌ಗೆ ಅನುವಾದವಾಗಿರುವ ಕನ್ನಡದ ವಿವೇಕ್‌ ಶಾನಭಾಗ್‌ ಅವರ ‘ಘಾಚಾರ್‌ ಘೋಚಾರ್‌’ (ಲೇಖಕ: ಶ್ರೀನಾಥ ಪೆರೂರ್‌) ಹಾಗೂ ಕೊಂಕಣಿಗೆ ಅನುವಾದವಾಗಿರುವ ಗೋಪಾಲಕೃಷ್ಣ ಪೈ ಅವರ ‘ಸ್ವಪ್ನ ಸಾರಸ್ವತ’ (ಲೇಖಕಿ ಜಯಶ್ರೀ ಶಾನಭಾಗ್‌), ತೆಲುಗಿಗೆ ಅನುವಾದಗೊಂಡಿರುವ ಶಾಂತಿನಾಥ ದೇಸಾಯಿ ಅವರ ‘ಓಂ ಣಮೋ’ (ಲೇಖಕ: ರಂಗನಾಥ ರಾಮಚಂದ್ರರಾವ್‌) ಪುರಸ್ಕಾರಕ್ಕೆ ಆಯ್ಕೆಯಾದ ಕನ್ನಡ ಮೂಲದ ಕೃತಿಗಳಾಗಿವೆ.

ಭಾರತದ ಒಟ್ಟು 24 ಭಾಷೆಗಳ ಅನುವಾದಿತ ಕೃತಿಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದು, ₹ 50,000 ನಗದು ಹಾಗೂ ತಾಮ್ರಪತ್ರವನ್ನು ಒಳಗೊಂಡಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು