ಶನಿವಾರ, ಅಕ್ಟೋಬರ್ 31, 2020
27 °C

ನೇಪಾಳ ಪಠ್ಯದಲ್ಲಿ ಪರಿಷ್ಕೃತ ನಕ್ಷೆ: ಪುಸ್ತಕ ವಿತರಣೆಗೆ ತಡೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕಠ್ಮಂಡು: ಭಾರತದ ಮೂರು ಪ್ರಮುಖ ಆಯಕಟ್ಟಿನ ಪ್ರದೇಶಗಳನ್ನು ಒಳಗೊಂಡಿರುವ ಪರಿಷ್ಕೃತ ರಾಜಕೀಯ ನಕ್ಷೆಯನ್ನು ಸೇರಿಸಿದ್ದ ಶಾಲಾಪಠ್ಯ ಪುಸ್ತಕದ ವಿತರಣೆಯನ್ನು ತಕ್ಷಣವೇ ನಿಲ್ಲಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.

9ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಸಿದ್ಧಪಡಿಸಿರುವ ‘ನೇಪಾಳದ ಟೆರ‍್ರಿಟರಿ ಅಂಡ್ ರೀಡಿಂಗ್ ಮೆಟೀರಿಯಲ್ಸ್‌ ಫಾರ್‌ ಬಾರ್ಡರ್ ಇಶ್ಯೂಸ್‘ ಪಠ್ಯದಲ್ಲಿ ಇದನ್ನು ಸೇರಿಸಲಾಗಿತ್ತು. ಪುಸ್ತಕ ವಿತರಣೆ ಮತ್ತು ಮುದ್ರಣವನ್ನು ನಿಲ್ಲಿಸುವಂತೆ ಶಿಕ್ಷಣ ಸಚಿವಾಲಯಕ್ಕೆ ಸೂಚಿಸಲಾಗಿದೆ ಎಂದು ಕಠ್ಮಂಡು ಪೋಸ್ಟ್‌ ವರದಿ ಮಾಡಿದೆ. 

‘ಶಿಕ್ಷಣ ಸಚಿವಾಲಯಕ್ಕೆ ನೇಪಾಳದ ಭೌಗೋಳಿಕ ಪ್ರದೇಶವನ್ನು ಬದಲಾಯಿಸುವ ಅಧಿಕಾರವಿಲ್ಲ ಮತ್ತು ಪುಸ್ತಕದಲ್ಲಿ ಹಲವು ದೋಷಗಳಿವೆ. ದೋಷ ಸರಿಪಡಿಸಲು ಕ್ರಮ ತೆಗೆದುಕೊಳ್ಳುವಂತೆ ಉನ್ನತ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಭೂ ಸುಧಾರಣೆ ಮತ್ತು ಸಹಕಾರಿ ಸಚಿವಾಲಯದ ವಕ್ತಾರ ಜನಕ್ ರಾಜ್ ಜೋಶಿ ತಿಳಿಸಿದ್ದಾರೆ. 

ನೇಪಾಳ ಭೂಪ್ರದೇಶ ಮತ್ತು ಭಾರತದೊಂದಿಗೆ ಗಡಿ ವಿವಾದದ ಕುರಿತ ಐತಿಹಾಸಿಕ ಸಂಗತಿಗಳನ್ನು ಒಳಗೊಂಡಿರುವ 110 ಪುಟಗಳ ಪುಸ್ತಕವನ್ನು ನೇಪಾಳ ಶಿಕ್ಷಣ ಸಚಿವರು ಸೆಪ್ಟೆಂಬರ್ 15 ರಂದು ಬಿಡುಗಡೆ ಮಾಡಿದ್ದರು. 

ಭಾರತಕ್ಕೆ ಸೇರಿದ ಲಿಪುಲೇಖ್, ಕಾಲಾಪಾನಿ ಮತ್ತು ಲಿಂಪಿಯಾ ಧುರಾ ಪ್ರದೇಶಗಳನ್ನೊಳಗೊಂಡು ತಯಾರಿಸಿದ ಪರಿಷ್ಕೃತ ನಕ್ಷೆಗೆ ನೇಪಾಳದ ಸಂಸತ್ತು ಸರ್ವಾನುಮತದಿಂದ ಅಂಗೀಕರಿಸಿತ್ತು. ಆದರೆ ಈ ಪರಿಷ್ಕೃತ ನಕ್ಷೆಯನ್ನು ಭಾರತ ತಿರಸ್ಕರಿಸಿತ್ತು. ‘ಇದೊಂದು, ಕೃತಕ ವಿಸ್ತರಣೆ. ಸಮ್ಮತವಲ್ಲದ್ದು’ ಎಂದು ಆಕ್ಷೇಪವನ್ನು ಭಾರತ ದಾಖಲಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು