ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವದೆಹಲಿ ವಿಶ್ವದ ಅತ್ಯಂತ ಕಲುಷಿತ ನಗರ: ವರದಿ

Last Updated 22 ಮಾರ್ಚ್ 2022, 6:39 IST
ಅಕ್ಷರ ಗಾತ್ರ

ನವದೆಹಲಿ:ದೇಶದ ರಾಜಧಾನಿ ನವದೆಹಲಿಯು ಸತತ ಎರಡನೇ ವರ್ಷವೂ ವಿಶ್ವದ ಅತ್ಯಂತ ಕಲುಷಿತ ನಗರ ಎಂಬ ಅಪಖ್ಯಾತಿಗೆ ಪಾತ್ರವಾಗಿದೆ. ನಂತರದ ಸ್ಥಾನದಲ್ಲಿ ಢಾಕಾ (ಬಾಂಗ್ಲಾದೇಶ), ಎನ್‌ಜಮೆನಾ (ಚಾಡ್), ದುಶಾಂಬೆ (ತಜಿಕಿಸ್ತಾನ) ಮತ್ತು ಮಸ್ಕತ್ (ಒಮನ್) ನಗರಗಳಿವೆ.

2021ರ ಮಧ್ಯ ಮತ್ತು ದಕ್ಷಿಣ ಏಷ್ಯಾದ 15 ಅತ್ಯಂತ ಕಲುಷಿತ ನಗರಗಳ ಪೈಕಿ 12 ನಗರಗಳು ಭಾರತದಲ್ಲಿವೆ. ನವದೆಹಲಿಯು 2021ರ ಪಿಎಂ2.5(ಗಾಳಿಯ ಧೂಳಿನ ಪ್ರಮಾಣ) ಸಾಂದ್ರತೆಯಲ್ಲಿ 14.6 ಶೇಕಡಾ ಹೆಚ್ಚಳವನ್ನು ಕಂಡಿದೆ.

ಭಾರತದ 48 ಪ್ರತಿಶತ ನಗರಗಳಲ್ಲಿ ವಾರ್ಷಿಕ PM2.5 ಸಾಂದ್ರತೆಯು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ವಾಯು ಗುಣಮಟ್ಟದ ಮಾರ್ಗಸೂಚಿಗಳಿಗಿಂತ 10 ಪಟ್ಟು ಹೆಚ್ಚಾಗಿದೆ.

ಭಾರತದಲ್ಲಿ ವಿಶೇಷವಾಗಿ ಚಳಿಗಾಲದ ತಿಂಗಳುಗಳಲ್ಲಿ ದೆಹಲಿ ಸುತ್ತಲಿನ ರಾಜ್ಯಗಳಲ್ಲಿ ಭತ್ತದ ಹುಲ್ಲು ಸುಡುವುದು ಸಾಮಾನ್ಯವಾಗಿದೆ.

ಕೃಷಿ ತ್ಯಾಜ್ಯ ಸುಡುವ ಅವಧಿಯಲ್ಲಿ, ನಗರದಲ್ಲಿನ ಶೇಕಡಾ 45 ರಷ್ಟು ಮಾಲಿನ್ಯಕ್ಕೆ ಅದರ ಹೊಗೆ ಕಾರಣವಾಗಿದೆ.

ಮಂಗಳವಾರ 2021 ರ ವಿಶ್ವ ವಾಯು ಗುಣಮಟ್ಟ ವರದಿಯಲ್ಲಿ ಈ ಮಾಹಿತಿ ಬೆಳಕಿಗೆ ಬಂದಿದೆ. ಅದರ ಪ್ರಕಾರ, ಕೇವಲ ಮೂರು ಪ್ರತಿಶತದಷ್ಟು ನಗರಗಳನ್ನು ಹೊರತುಪಡಿಸಿ ಯಾವುದೇ ದೇಶವು ಇತ್ತೀಚಿನ ವಿಶ್ವ ಆರೋಗ್ಯ ಸಂಸ್ಥೆಯ ವಾರ್ಷಿಕ ವಾಯು ಗುಣಮಟ್ಟದ ಮಾರ್ಗಸೂಚಿಗಳನ್ನು ಪೂರೈಸಿಲ್ಲ.

ವರದಿಯ ಪ್ರಕಾರ, 117 ದೇಶಗಳಲ್ಲಿನ 6,475 ನಗರಗಳಲ್ಲಿನ ವಾಯು ಮೇಲ್ವಿಚಾರಣಾ ಕೇಂದ್ರಗಳಿಂದ ವಾಯು ಮಾಲಿನ್ಯವನ್ನು ವಿಶ್ಲೇಷಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT