ನವದೆಹಲಿ: ಕಲಾಪಕ್ಕೆ ವಕೀಲರ ಹಾಜರಾತಿಯ ಮಾಹಿತಿಯನ್ನು ಕೋರ್ಟ್‌ಗೆ ತಿಳಿಸುವ ವಿಧಾನವನ್ನು ಸರಳಗೊಳಿಸಲಾಗಿದ್ದು, ಸುಪ್ರೀಂ ಕೋರ್ಟ್ ರೂಪಿಸಿರುವ ಆನ್‌ಲೈನ್ ಪೋರ್ಟಲ್ ಜನವರಿ 2ರಿಂದ ಸಕ್ರಿಯಗೊಳ್ಳಲಿದೆ.
ಪೋರ್ಟಲ್ ಕುರಿತಂತೆ ಡಿ.16ರಂದು ಮಾಹಿತಿ ನೀಡಿದ್ದ ಸಿಜೆಐ ಡಿ.ವೈ. ಚಂದ್ರಚೂಡ್, ವಕೀಲರು ಇನ್ನು ಮುಂದೆ ಲಿಖಿತವಾಗಿ ತಮ್ಮ ಹಾಜರಾತಿಯನ್ನು ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ ಎಂದಿದ್ದರು. ವಕೀಲರು ತಮ್ಮ ಹಾಜರಾತಿಯನ್ನು ಆನ್‌ಲೈನ್ ವಿಧಾನದಲ್ಲಿ ವಕೀಲರ ಹಾಜರಾತಿ ಪೋರ್ಟಲ್‌ನಲ್ಲಿ ನಮೂದಿಸಿದರೆ ಸಾಕು.
ಪ್ರಸ್ತುತ ಈಗಿರುವ ವಿಧಾನದಲ್ಲಿ, ವಕೀಲರು ತಮ್ಮ ಹೆಸರು, ಪ್ರಕರಣ, ಪ್ರಕರಣದ ಸಂಖ್ಯೆಯನ್ನು ಗೊತ್ತುಪಡಿಸಿದ ನಮೂನೆಯಲ್ಲಿ ಲಿಖಿತವಾಗಿ ಅಥವಾ ಇ–ಮೇಲ್ ಮೂಲಕ ಸಲ್ಲಿಸಬೇಕಿದೆ. ನಮೂನೆಯನ್ನು ಸಲ್ಲಿಸಿದರೆ, ಅವರು ಕಲಾಪದಲ್ಲಿ ಹಾಜರಾಗಿದ್ದಾರೆ ಎಂದು ಪರಿಗಣಿಸಲಾಗುತ್ತದೆ. ಕೋರ್ಟ್‌ನ ತೀರ್ಪುಗಳಲ್ಲಿ ವಕೀಲರ ಹೆಸರು ಉಲ್ಲೇಖವಾಗುತ್ತದೆ. ಹೊಸ ವರ್ಷದಿಂದ ಈ ವಿಧಾನ ಕೊನೆಗೊಳ್ಳಲಿದೆ.
ನಿಖರತೆ, ಕಾರ್ಯಕ್ಷಮತೆ ತರುವ ಉದ್ದೇಶದಿಂದ ‘ಅಡ್ವೊಕೇಟ್ ಆನ್ ರೆಕಾರ್ಡ್’ (ಎಒಆರ್) ವಿಧಾನವನ್ನು ಪರಿಚಯಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.