ಸೋಮವಾರ, ಮಾರ್ಚ್ 27, 2023
33 °C

ರಾಷ್ಟ್ರಪತಿ ಪ್ರಮಾಣ ವಚನ: ಸಂತಾಲಿ ಸೀರೆಯಲ್ಲಿ ಮಿಂಚಲಿದ್ದಾರೆ ಹೊಸ ಪ್ರೆಸಿಡೆಂಟ್

ಪಿಟಿಐ Updated:

ಅಕ್ಷರ ಗಾತ್ರ : | |

ಭುವನೇಶ್ವರ: ನೂತನವಾಗಿ ಆಯ್ಕೆಯಾಗಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಾಂಪ್ರದಾಯಿಕ ಸಂತಾಲಿ ಸೀರೆ ಉಡಲಿದ್ದಾರೆ ಎನ್ನಲಾಗಿದೆ.

ದ್ರೌಪದಿ ಅವರ ಸಂಬಂಧಿ ಸುಕ್ರಿ ತುಡು ಈಗಾಗಲೇ ದೆಹಲಿಗೆ ತೆರಳಿದ್ದು, ಈಶಾನ್ಯ ಭಾರತದಲ್ಲಿ ಸಂತಾಲ್ ಮಹಿಳೆಯರು ಧರಿಸುವ ಸಾಂಪ್ರದಾಯಿಕ ಸೀರೆಯೊಂದನ್ನು ಜತೆಗೆ ಒಯ್ದಿದ್ದಾರೆ.

ಸಂಸತ್ ಭವನದ ಕೇಂದ್ರ ಸಭಾಂಗಣದಲ್ಲಿ ನಡೆಯುವ ನೂತನ ರಾಷ್ಟ್ರಪತಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಸುಕ್ರಿ ಮತ್ತು ಅವರ ಪತಿ ಭಾಗವಹಿಸಲಿದ್ದಾರೆ.

ಅಕ್ಕನಿಗಾಗಿ ನಾನೊಂದು ವಿಶೇಷ ಸೀರೆಯನ್ನು ಒಯ್ಯುತ್ತಿದ್ದೇನೆ. ಅದನ್ನವರು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಉಡಬೇಕೆಂದು ನನ್ನ ಕೋರಿಕೆ. ಆದರೆ ರಾಷ್ಟ್ರಪತಿ ಭವನದ ನಿಯಮಗಳ ಪ್ರಕಾರ ಅವರು ವಸ್ತ್ರ ಧರಿಸಬಹುದು ಎಂದು ಸುಕ್ರಿ ಹೇಳಿದ್ದಾರೆ.

ಸಂತಾಲ್ ಮಹಿಳೆಯರು ವಿಶೇಷ ಸಂದರ್ಭದಲ್ಲಿ ಸಂತಾಲಿ ಸೀರೆಯನ್ನು ಧರಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು