ಶನಿವಾರ, ಮೇ 15, 2021
29 °C

ಭಾರತದಿಂದ ಕೋವಿಡ್-19 ಲಸಿಕೆ ರಫ್ತು ನಿಷೇಧಿಸಿಲ್ಲ: ಕೇಂದ್ರ ಸರ್ಕಾರ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

AFP Photo

ನವದೆಹಲಿ: ದೇಶದಲ್ಲಿ ಕೋವಿಡ್ ಲಸಿಕೆಯ ರಫ್ತನ್ನು ನಿಷೇಧಿಸಿಲ್ಲ, ಮುಂದಿನ ವಾರ ಮತ್ತು ತಿಂಗಳಿನಿಂದ ಹಂತಹಂತವಾಗಿ ಅಗತ್ಯವಿರುವ ರಾಷ್ಟ್ರಗಳಿಗೆ ಲಸಿಕೆ ಸರಬರಾಜು ಮಾಡಲಾಗುತ್ತದೆ ಎಂದು ಮೂಲಗಳು ಗುರುವಾರ ಹೇಳಿವೆ.

ದೇಶದಲ್ಲಿ ಲಸಿಕೆ ಕಾರ್ಯಕ್ರಮ ನಡೆಯುತ್ತಿದೆ. ಅದಕ್ಕೆ ಪೂರಕವಾಗಿ ಮತ್ತು ಹೊರದೇಶಗಳಿಗೆ ಲಸಿಕೆ ಕಳುಹಿಸಿಕೊಡಲು ಅನುಕೂಲವಾಗುವಂತೆ ಅಗತ್ಯ ಸಂಖ್ಯೆಯಲ್ಲಿ ಲಸಿಕೆ ಉತ್ಪಾದನೆ ಮತ್ತು ಪೂರೈಕೆಯನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದೆ.

ದೇಶದಲ್ಲಿ ಲಸಿಕೆಗೆ ಸಾಕಷ್ಟು ಬೇಡಿಕೆಯಿದೆ, ಅದನ್ನು ಸಮರ್ಥವಾಗಿ ಪೂರೈಸಿ, ಹೆಚ್ಚುವರಿ ಉತ್ಪಾದನೆ ಮೂಲಕ ಹಂತಹಂತವಾಗಿ ಲಸಿಕೆ ರಫ್ತು ಮಾಡಿ, ಯೋಜನೆ ಯಶ‌ಸ್ವಿಯಾಗಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಜನವರಿ 20ರಿಂದ ವಿವಿಧ ರಾಷ್ಟ್ರಗಳಿಗೆ ಭಾರತ ಹಂತಹಂತವಾಗಿ ಲಸಿಕೆ ಪೂರೈಸುತ್ತಿದೆ. ಈಗಾಗಲೇ 6 ಕೋಟಿ ಡೋಸ್‌ ಲಸಿಕೆಯನ್ನು 75ಕ್ಕೂ ಅಧಿಕ ರಾಷ್ಟ್ರಗಳಿಗೆ ಕಳುಹಿಸಿಕೊಡಲಾಗಿದೆ.

ಜತೆಗೆ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಏಪ್ರಿಲ್‌ 1ರಿಂದ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು