ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ ಅಡ್ಡ ಪರಿಣಾಮಕ್ಕೆ ವಿಮೆ ಇಲ್ಲ: ಚೌಬೆ

Last Updated 9 ಫೆಬ್ರುವರಿ 2021, 11:53 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಲಸಿಕೆ ಪಡೆದವರಿಗೆ ಲಸಿಕೆಯಿಂದ ಯಾವುದಾದರೂ ಅಡ್ಡ ಪರಿಣಾಮ ಅಥವಾ ವೈದ್ಯಕೀಯ ಸಮಸ್ಯೆ ಕಾಣಿಸಿಕೊಂಡರೆ ಅದಕ್ಕೆ ವಿಮಾ ಪರಿಹಾರ ನೀಡಲಾಗದು ಎಂದು ಕೇಂದ್ರ ಸರ್ಕಾರವು ಮಂಗಳವಾರ ರಾಜ್ಯಸಭೆಗೆ ತಿಳಿಸಿದೆ.

ಕೋವಿಡ್‌– 19 ಲಸಿಕೆಯನ್ನು ಫಲಾನುಭವಿಗಳು ಸ್ವಯಂಪ್ರೇರಿತವಾಗಿ ಪಡೆದುಕೊಳ್ಳುತ್ತಿದ್ದಾರೆ. ಇದಕ್ಕೆ ಯಾವುದೇ ವಿಮಾ ಪರಿಹಾರ ನೀಡಲಾಗದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ರಾಜ್ಯಸಭೆಯಲ್ಲಿ ಕೇಳಲಾಗಿದ್ದ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ್ದಾರೆ.

ಲಸಿಕೆ ಪಡೆದವರನ್ನು ಲಸಿಕಾ ಕೇಂದ್ರದಲ್ಲಿ 30 ನಿಮಿಷಗಳ ಅವಧಿಯವರೆಗೆ ನಿಗಾದಲ್ಲಿರಿಸಲಾಗುತ್ತದೆ. ಅಷ್ಟರಲ್ಲಿ ಅವರಿಗೇನಾದರೂ ಲಸಿಕೆಯಿಂದ ಅಡ್ಡ ಪರಿಣಾಮ ಕಾಣಿಸಿದರೆ ತಕ್ಷಣವೇ ಅವರಿಗೆ ಉಚಿತ ಚಿಕಿತ್ಸೆ ಕೊಡುವ ವ್ಯವಸ್ಥೆಯೂ ಇದೆ ಎಂದು ಅವರು ಹೇಳಿದ್ದಾರೆ.

ಕೋವ್ಯಾಕ್ಸಿನ್‌ ಮತ್ತು ಕೋವಿಶೀಲ್ಡ್‌ ಲಸಿಕೆ ಪಡೆದವರಲ್ಲಿ ಹೆಚ್ಚಿನ ಅಡ್ಡ ಪರಿಣಾಮ ಉಂಟಾಗಿಲ್ಲ. ಫೆಬ್ರುವರಿ 4ರವರೆಗೆ ಲಸಿಕೆ ಹಾಕಿಸಿಕೊಂಡವರಲ್ಲಿ ಕೇವಲ 81 ಜನರಿಗೆ ಮಾತ್ರ ಅಡ್ಡ ಪರಿಣಾಮದ ಲಕ್ಷಣಗಳು ಕಾಣಿಸಿಕೊಂಡಿವೆ. ಇದರ ಪ್ರಮಾಣ ಕೂಡ ಶೇ 0.096 ಮಾತ್ರವಿದೆ ಎಂದು ಅವರು ಹೇಳಿದ್ದಾರೆ.

ಕೋವಿಶೀಲ್ಡ್‌ ಲಸಿಕೆ ಪಡೆದ 8,402 ಫಲಾನುಭವಿಗಳಲ್ಲಿ ಅಡ್ಡ ಪರಿಣಾಮ ಕಾಣಿಸಿರುವುದು ಶೇ. 0.192ರಷ್ಟು ಮಾತ್ರ. ಅದೂ ಅಡ್ಡ ಪರಿಣಾಮ ಕಾಣಿಸಿದ್ದರೆ ಆತಂಕ, ಜ್ವರ, ತಲೆಸುತ್ತು, ನೋವು, ತುರಿಕೆ ಹಾಗೂ ತಲೆನೋವಿನ ಲಕ್ಷಣಗಳು ಅಷ್ಟೇ. ಇವೆಲ್ಲವೂ ಚೇತರಿಸಿಕೊಳ್ಳಬಹುದಾದ ಲಕ್ಷಣಗಳು ಎಂದು ಅವರು ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT