ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಈಡೇರಿಸದ ಪಂಜಾಬ್ ಸರ್ಕಾರದ ವಿರುದ್ಧ ಸೇಡು ತೀರಿಸಿಕೊಳ್ಳಿ: ಕೇಜ್ರಿವಾಲ್

Last Updated 21 ಮಾರ್ಚ್ 2021, 16:13 IST
ಅಕ್ಷರ ಗಾತ್ರ

ಚಂಡೀಗಡ: ಕಳೆದ ನಾಲ್ಕು ವರ್ಷಗಳಲ್ಲಿ ಪಂಜಾಬ್ ಸರ್ಕಾರವು 'ಒಂದೇ ಒಂದು ಭರವಸೆಯನ್ನು ಸಹ ಈಡೇರಿಸಿಲ್ಲ ಎಂದು ಆರೋಪಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, 2022ರ ವಿಧಾನಸಭಾ ಚುನಾವಣೆಯಲ್ಲಿ 'ಸೇಡು ತೀರಿಸಿಕೊಳ್ಳಲು' ಜನರಿಗೆ ಕರೆ ನೀಡಿದರು.

ಪಂಜಾಬ್‌ನ ಮೊಗಾದಲ್ಲಿ ಆಮ್ ಆದ್ಮಿ ಪಕ್ಷದಿಂದ (ಎಎಪಿ) ಆಯೋಜಿಸಲಾಗಿದ್ದ ಕಿಸಾನ್ ಮಹಾ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ತಮ್ಮ ಪಕ್ಷವು ಯಾವಾಗಲೂ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತದೆ ಎಂದು ಹೇಳಿದ್ದಾರೆ.

2021ರ ದೆಹಲಿ ಸರ್ಕಾರ ರಾಷ್ಟ್ರೀಯ ರಾಜಧಾನಿ ವಲಯ (ತಿದ್ದುಪಡಿ) ಮಸೂದೆಯ ಬಗ್ಗೆ ಕಿಡಿಕಾರಿದ ಅವರು, ದೆಹಲಿಯ ಮುಖ್ಯಮಂತ್ರಿಯಿಂದ 'ಅಧಿಕಾರವನ್ನು ಕಸಿದುಕೊಳ್ಳಲು' ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬಯಸಿದೆ ಎಂದು ಆರೋಪಿದರು.

ನಾಲ್ಕು ವರ್ಷಗಳ ಹಿಂದೆ ವಿಧಾನಸಭೆ ಚುನಾವಣೆ ನಡೆದಾಗ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು 'ದೊಡ್ಡ ಭರವಸೆಗಳನ್ನು' ನೀಡಿದ್ದರು. ಸ್ಮಾರ್ಟ್‌ಫೋನ್‌ ನೀಡಲಾಗುವುದು ಎಂದು ಕ್ಯಾಪ್ಟನ್ ಸಾಹಿಬ್ ಹೇಳಿದ್ದರು. ಯಾರಿಗೆಲ್ಲ ಸ್ಮಾರ್ಟ್‌ಫೋನ್‌ ಸಿಕ್ಕಿಗೆ ನಿಮ್ಮ ಕೈಗಳನ್ನು ಮೇಲಕ್ಕೆತ್ತಿ. ರೈತರ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಕ್ಯಾಪ್ಟನ್ ಸಾಹಿಬ್ ಹೇಳಿದ್ದರು. ಆದರೆ ಯಾರ ಸಾಲವನ್ನು ಪಂಜಾಬ್ ಮುಖ್ಯಮಂತ್ರಿ ವಿರುದ್ಧ ಕಿಡಿಕಾರಿದರು.

'ಅಮರಿಂದರ್ ಸಿಂಗ್ ಅವರು ಪ್ರತಿ ಮನೆಗೆ ಉದ್ಯೋಗ ನೀಡುವ ಭರವಸೆ ನೀಡಿದ್ದರು. ಆದರೆ ಯಾರಿಗೆಲ್ಲ ಉದ್ಯೋಗ ಸಿಕ್ಕಿದೆ ಹೇಳಿ' ಎಂದು ನೆರೆದಿದ್ದವರನ್ನು ಪ್ರಶ್ನಿಸಿದರು. ನಿರುದ್ಯೋಗ ಭತ್ಯೆ ಕಾರ್ಡ್ ಅನ್ನು ತೋರಿಸಿ, ಪ್ರತಿ ಮನೆಗೆ ಉದ್ಯೋಗ ನೀಡುವ ಭರವಸೆ ನೀಡಿದ್ದ ಕಾಂಗ್ರೆಸ್, ಇದನ್ನು 20 ಲಕ್ಷ ಯುವಕರಿಗೆ ನೀಡಿತ್ತು' ಎಂದು ಹೇಳಿದರು.

ಉದ್ಯೋಗದ ಕಾರ್ಡ್‌ಗಳನ್ನು ಎಸೆಯಬೇಡಿ ಎಂದು ಜನರನ್ನು ಒತ್ತಾಯಿಸಿದ ಕೇಜ್ರಿವಾಲ್, ಅಮರಿಂದರ್ ಸಿಂಗ್ ಹೇಗೆ ಜನರಿಗೆ 'ಸುಳ್ಳು' ಹೇಳಿ ತಮ್ಮ ಮತಗಳನ್ನು ತೆಗೆದುಕೊಂಡರು ಎಂಬುದನ್ನು ಇದು ನೆನಪಿಸುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT