ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ಅತಿ ದೊಡ್ಡ ‘ಪಿಂಕ್‌ ಡೈಮಂಡ್‌’ ಗಣಿ ಸ್ಥಗಿತ

Last Updated 3 ನವೆಂಬರ್ 2020, 12:37 IST
ಅಕ್ಷರ ಗಾತ್ರ

ಸಿಡ್ನಿ: ಪಶ್ಚಿಮ ಆಸ್ಟ್ರೇಲಿಯಾದ ಕಿಂಬರ್ಲಿ ಪ್ರದೇಶದಲ್ಲಿದ್ದ‘ಆರ್ಗೈಲ್‌’ ಹೆಸರಿನ ವಿಶ್ವದ ಅತ್ಯಂತ ದೊಡ್ಡ ನಸುಗೆಂಪು ಬಣ್ಣದ ವಜ್ರದ (ಪಿಂಕ್‌ ಡೈಮಂಡ್‌) ಗಣಿಯಲ್ಲಿ ದುಬಾರಿ ಬೆಲೆಯ ವಜ್ರದ ಹರಳುಗಳ ಸಂಪನ್ಮೂಲ ಖಾಲಿಯಾಗಿರುವ ಕಾರಣ ಗಣಿಯನ್ನು ಮುಚ್ಚಲಾಗಿದೆ ಎಂದು ರಿಯೊ ಟಿಂಟೊ ಕಂಪನಿ ತಿಳಿಸಿದೆ.

ವಿಶ್ವದ ಶೇ 90 ನಸುಗೆಂಪು ಬಣ್ಣದ ವಜ್ರವನ್ನು ಈ ಗಣಿಯಿಂದ ತೆಗೆಯಲಾಗಿತ್ತು. 1979ರಲ್ಲಿ ಈ ಪ್ರದೇಶದಲ್ಲಿ ವಜ್ರದ ಪದರವನ್ನು ಪತ್ತೆಹಚ್ಚಲಾಗಿತ್ತು. ಇದಾದ ನಾಲ್ಕು ವರ್ಷದ ಬಳಿಕ ಆ್ಯಂಗ್ಲೊ–ಆಸ್ಟ್ರೇಲಿಯಾ ಮೂಲದ ಕಂಪನಿಯು ಇಲ್ಲಿ ಉತ್ಕನನ ಆರಂಭಿಸಿತ್ತು. ಅಲ್ಲಿಂದ ಇಲ್ಲಿಯವರೆಗೂ ಈ ಗಣಿಯಲ್ಲಿ 86.50 ಕೋಟಿ ಕ್ಯಾರೆಟ್‌ ಒರಟಾದ ವಜ್ರಗಳನ್ನು ಉತ್ಪಾದನೆ ಮಾಡಲಾಗಿದೆ ಎಂದು ರಿಯೊ ಟಿಂಟೊ ತಿಳಿಸಿದೆ.

‘ಕಳೆದ ಎರಡು ದಶಕದಲ್ಲಿ ಈ ವಜ್ರದ ಮೌಲ್ಯ ಶೇ 500ರಷ್ಟು ಅಧಿಕವಾಗಿದೆ. ಇದೀಗ ಗಣಿಯ ಕಾರ್ಯವನ್ನು ಸ್ಥಗಿತಗೊಳಿಸಿ, ಈ ಭೂಮಿಯನ್ನು ಮತ್ತೆ ಪುನಃಸ್ಥಾಪಿಸಿ ಅದರ ಮೂಲವಾರಸುದಾರರಿಗೆ ಮರಳಿಸುತ್ತೇವೆ’ ಎಂದು ಗಣಿ ವ್ಯವಸ್ಥಾಪಕ ಆ್ಯಂಡ್ರೂ ವಿಲ್ಸನ್‌ ತಿಳಿಸಿದರು. ಆರ್ಗೈಲ್‌ ಗಣಿ ಮುಚ್ಚಿದ ಕಾರಣ ಗುಲಾಬಿ ವಜ್ರದ ದರವು ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಚಿನ್ನಾಭರಣ ತಯಾರಕರು ತಿಳಿಸಿದ್ದಾರೆ. ಪ್ರಸ್ತುತ ಪ್ರತಿ ಕ್ಯಾರೆಟ್‌ ನಸುಗೆಂಪು ಬಣ್ಣದ ವಜ್ರದ ಬೆಲೆ ₹30 ಲಕ್ಷವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT