ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಗಾಸಸ್ ಖರೀದಿಸಲೆಂದೇ ಭದ್ರತಾ ಸಮಿತಿಯ ಬಜೆಟ್‌ ಏರಿಸಲಾಯಿತೇ? ಕಾಂಗ್ರೆಸ್‌

Last Updated 23 ಜುಲೈ 2021, 16:26 IST
ಅಕ್ಷರ ಗಾತ್ರ

ದೆಹಲಿ: ‘2017-18ನೇ ಸಾಲಿನಲ್ಲಿ ರಾಷ್ಟ್ರೀಯ ಭದ್ರತಾ ಸಮಿತಿಯ ಬಜೆಟ್‌ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಪೆಗಾಸಸ್ ಖರೀದಿಸಲು ಈ ಹಣ ಬಳಕೆಯಾಗಿದೆಯೇ? ಪೆಗಾಸಸ್ ಖರೀದಿಸಲೆಂದೇ ಸಮಿತಿಯ ಬಜೆಟ್ ಅನ್ನು ಏರಿಕೆ ಮಾಡಲಾಯಿತೆ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘2014-15ರಲ್ಲಿ ಈ ಸಮಿತಿಯ ಬಜೆಟ್ ₹ 44.46 ಕೋಟಿಯಷ್ಟು ಇತ್ತು. 2016-17ರಲ್ಲಿ ಅದನ್ನು ₹ 33 ಕೋಟಿಗೆ ಇಳಿಸಲಾಗಿತ್ತು. 2017-18ರಲ್ಲಿ ಈ ಸಮಿತಿಯ ಬಜೆಟ್ ಅನ್ನು ₹ 333 ಕೋಟಿಗೆ ಏರಿಕೆ ಮಾಡಲಾಗಿದೆ. ಅದೇ ವರ್ಷ ರಾಷ್ಟ್ರೀಯ ಭದ್ರತಾ ಸಮಿತಿಯಲ್ಲಿ ಸೈಬರ್ ಭದ್ರತೆ ಸಂಶೋಧನೆ ಮತ್ತು ಅಭಿವೃದ್ಧಿ ಘಟಕವನ್ನು ಆರಂಭಿಸಲಾಗಿದೆ. ಅದೇ ವರ್ಷದಿಂದ ಪೆಗಾಸಸ್ ಗೂಢಚರ್ಯೆ ಆರಂಭವಾಗಿದೆ. ಪೆಗಾಸಸ್ ಖರೀದಿಸಲೆಂದೇ ಇಷ್ಟು ದೊಡ್ಡ ಮೊತ್ತವನ್ನು ನೀಡಲಾಗಿದೆ ಎಂಬುದು ಸ್ಪಷ್ಟ’ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಆಪಾದಿಸಿದ್ದಾರೆ.

‘ರಫೇಲ್‌ ಖರೀದಿ ತನಿಖೆಯ ಹಾದಿ ತಪ್ಪಿಸಲು ಪೆಗಾಸಸ್ ಗೂಢಚರ್ಯೆ ಬಳಸಲಾಗಿದೆ. ಬಿಜೆಪಿ ನಾಯಕರಾದ ಅರುಣ್ ಶೌರಿ ಮತ್ತುಮತ್ತು ಪ್ರಶಾಂತ್ ಭೂಷಣ್ ಅವರು 2018ರ ಅಕ್ಟೋಬರ್‌ನಲ್ಲಿ ಅಂದಿನ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಭೇಟಿ ಮಾಡಿ ದೂರು ನೀಡಿದ್ದರು. ಆನಂತರ ಅಲೋಕ್ ವರ್ಮಾ ಮತ್ತು ಅವರ ಕುಟುಂಬದ ಎಂಟು ಸದಸ್ಯರ ಫೋನ್‌ ಸಂಖ್ಯೆಯನ್ನು ಪೆಗಾಸಸ್ ಗೂಢಚರ್ಯೆ ಪಟ್ಟಿಗೆ ಸೇರಿಸಲಾಗಿದೆ’ ಎಂದು ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT