ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಿ ಉಪಚುನಾವಣೆ: ಮುನ್ನಡೆಯಲ್ಲಿ ಬಿಜೆಡಿ ಅಭ್ಯರ್ಥಿ

Last Updated 3 ಅಕ್ಟೋಬರ್ 2021, 8:21 IST
ಅಕ್ಷರ ಗಾತ್ರ

ಪುರಿ: ಒಡಿಶಾದ ಪುರಿ ಜಿಲ್ಲೆಯ ಪಿಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, 4ನೇ ಸುತ್ತಿನ ಬಳಿಕ ಬಿಜೆಡಿಯ ರುದ್ರಪ್ರತಾಪ ಮೊಹಂತಿ ಅವರು ಬಿಜೆಪಿ ಅಭ್ಯರ್ಥಿಗಿಂತ 5,140 ಮತಗಳ ಅಂತರದಿಂದ ಮುಂದಿದ್ದಾರೆ.

ಮೊಹಂತಿ ಅವರು 16,968 ಮತಗಳನ್ನು ಗಳಿಸಿದ್ದರೆ, ಬಿಜೆಪಿಯ ಅಶ್ರಿತ್ ಪಟ್ನಾಯಕ್‌ ಅವರು 11,828 ಮತ ಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಿಸ್ವೊಕೇಶನ್‌ ಹರಿಚಂದನ್‌ ಮೊಹಾಪಾತ್ರ 1,382 ಮತ ಗಳಿಸಿದ್ದಾರೆ.

ಕಣದಲ್ಲಿ 10 ಅಭ್ಯರ್ಥಿಗಳಿದ್ದಾರೆ. ಬಿಜೆಡಿ ಶಾಸಕರಾಗಿದ್ದ ಪ್ರದೀಪ್‌ ಮಹಾರಥಿ ಅವರ ನಿಧನದ ಕಾರಣ ಇಲ್ಲಿ ಉಪಚುನಾವಣೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT