ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾ: ಗರ್ಭಿಣಿಯನ್ನು 3 ಕಿ.ಮೀ ನಡೆಯುವಂತೆ ಮಾಡಿದ ಸಬ್ ‌ಇನ್‌ಸ್ಪೆಕ್ಟರ್‌ ಅಮಾನತು

Last Updated 30 ಮಾರ್ಚ್ 2021, 8:16 IST
ಅಕ್ಷರ ಗಾತ್ರ

ಮಯೂರ್‌ಭಂಜ್:‌ ಹೆಲ್ಮೆಟ್‌ ತಪಾಸಣೆ ಸಂದರ್ಭದಲ್ಲಿಗರ್ಭಿಣಿಗೆ ಕಿರುಕುಳ ನೀಡಿ, ಆಕೆಯನ್ನು 3 ಕಿ.ಮೀ. ನಡೆಯುವಂತೆ ಮಾಡಿದ ಆರೋಪದ ಮೇಲೆ ಇಲ್ಲಿನ ಸರಾಟ್‌ ಪೊಲೀಸ್ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ರೀನಾ ಬಕ್ಸಲ್‌ ಎನ್ನುವವರನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಪಿ) ಅಮಾನತು ಮಾಡಿದ್ದಾರೆ.

ಅಮಾನತು ಆದೇಶ ತಕ್ಷಣವೇ (ಮಾ.28) ಜಾರಿಗೆ ಬರಲಿದ್ದು, ಈ ಆದೇಶದ ಪ್ರತಿಯನ್ನು ಬರಿಪದ ಪ್ರಧಾನ ಕಚೇರಿಗೆ ರವಾನಿಸಲಾಗಿದೆ ಎಂದು ಎಸ್‌ಪಿ ಹೇಳಿಕೆ ನೀಡಿದ್ದಾರೆ.

ಠಾಣೆಯ ಉಸ್ತುವಾರಿಯನ್ನು ಸಹಾಯಕ ಸಬ್ ಇನ್ಸ್‌ಪೆಕ್ಟರ್ ಬಿ.ಡಿ.ದಾಸ್ಮೋಹಪಾತ್ರ ಅವರಿಗೆ ಹಸ್ತಾಂತರಿಸುವಂತೆ ಬಕ್ಸಲ್ ಅವರಿಗೆ ಸೂಚಿಸಲಾಗಿದೆ.ತನಗೆ ಮತ್ತು ತನ್ನ ಪತಿಗೆ ಠಾಣಾಧಿಕಾರಿ ಕಿರುಕುಳ ನೀಡಿದ್ದಾರೆ ಎಂದು ಗರ್ಭಿಣಿಯು ಆರೋಪಿಸಿದ್ದರು. ಅದಾದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.

‌ಗರ್ಭಿಣಿ ಗುರುಬಾರಿ ಅವರು ಆರೋಗ್ಯ ತಪಾಸಣೆ ಸಲುವಾಗಿ ಉದಲ ಉಪ ವಿಭಾಗೀಯ ಆರೋಗ್ಯ ಕೇಂದ್ರಕ್ಕೆ ತಮ್ಮ ಪತಿ ಬಿಕ್ರಮ್‌ ಬಿರುಲಿ ಅವರೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಬಿಕ್ರಮ್‌ ಹೆಲ್ಮೆಟ್‌ ಧರಿಸಿದ್ದರು. ಆದರೆ, ಗುರುಬಾರಿ ಅವರ ಬಳಿ ಇರಲಿಲ್ಲ.

ಹೀಗಾಗಿಬಿಕ್ರಮ್‌ ಅವರು, ತಮ್ಮ ಪತ್ನಿಯುಆರೋಗ್ಯದ ಕಾರಣದಿಂದ ಹೆಲ್ಮೆಟ್‌ ಧರಿಸಿಲ್ಲ ಎಂದು ಮನವಿ ಮಾಡಿದ್ದಾರೆ. ಇದನ್ನು ಲೆಕ್ಕಿಸದ ಅಧಿಕಾರಿ ಮೋಟಾರ್‌‌ ವಾಹನ ಕಾಯ್ದೆ ಅಡಿಯಲ್ಲಿ 500 ರೂ. ದಂಡ ಪಾವತಿಸುವಂತೆ ಸೂಚಿಸಿದ್ದಾರೆ.

ಅಷ್ಟಲ್ಲದೇ, ಗುರುಬಾರಿ ಅವರನ್ನು ಸ್ಥಳದಲ್ಲಿಯೇ ಬಿಟ್ಟು ಠಾಣೆಗೆ ಹೋಗಿ ದಂಡ ಪಾವತಿಸಿ ಬರುವಂತೆ ಬಿಕ್ರಮ್‌ ಅವರನ್ನು ಬಲವಂತ ಪಡಿಸಿದ್ದಾರೆ. ಬಳಿಕ ಗರ್ಭಿಣಿಯೂ ಉರಿಬಿಸಿಲಿನಲ್ಲಿ 3 ಕಿ.ಮೀ ದೂರದ ಠಾಣೆ ವರೆಗೆ ನಡೆದುಕೊಂಡು ಹೋಗಿದ್ದಾರೆ.

ತನಿಖಾ ವರದಿಯನ್ನು ಆಧರಿಸಿ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT