ಜೈಪುರ: ಅತ್ಯಾಚಾರ ಪ್ರಕರಣದಲ್ಲಿ ಕಳೆದ 7 ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಆರೋಪಿಯು ದೀಪಾವಳಿ ದಿನದಂದು ಸಂತ್ರಸ್ತೆಯ ಮನೆಗೆ ನುಗ್ಗಿಬೆಂಕಿ ಹಚ್ಚಿ ಕೊಲೆಮಾಡಲು ಪ್ರಯತ್ನಿಸಿರುವ ಘಟನೆ ಜೈಪುರದಲ್ಲಿ ನಡೆದಿದೆ.

ಪ್ರಕರಣ ಸಂಬಂಧ ಆತ್ಯಾಚಾರ ಆರೋಪಿ, ಆತನ ತಂದೆ ಹಾಗೂ ಇಬ್ಬರು ಸಹೋದರರನ್ನು ಬಂಧಿಸಲಾಗಿದೆ.ಘಟನೆ ವೇಳೆ ಸಂತ್ರಸ್ತೆ ಹಾಗೂ ಮುಖ್ಯ ಆರೋಪಿ ಇಬ್ಬರಿಗೂ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಜೈಪುರದ ಕೊತ್ವಾಲಿ ಪೊಲೀಸ್ ಠಾಣಾಧಿಕಾರಿ ಯಶ್ವಂತ್ ಸಿಂಗ್, ಆರೋಪಿಯು ಸಂತ್ರಸ್ತ ಮಹಿಳೆಯ ಸಂಬಂಧಿ ಮತ್ತು ಆಕೆಯ ಪಕ್ಕದ ಮನೆಯವನು. ದೀಪಾವಳಿ ದಿನದಂದು ಮಹಿಳೆಯ ಮನೆಗೆ ನುಗ್ಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಮಾಡಲು ಪ್ರಯತ್ನಿಸಿದ್ದಾನೆ. ಈ ಬಗ್ಗೆ ಸಂತ್ರಸ್ತ ಮಹಿಳೆಯಿಂದ ದೂರು ದಾಖಲಾಗಿದೆ.

ಸಂತ್ರಸ್ತೆಯ ದೇಹದ ಶೇ. 50 ರಷ್ಟು ಬಾಗ ಸುಟ್ಟುಹೋಗಿದ್ದು, ಆರೋಪಿಗೆ ಶೇ.30 ರಷ್ಟು ಗಾಯಗಳಾಗಿವೆ.

ವಿವಾಹಿತೆಯಾಗಿರುವ ಸಂತ್ರಸ್ತೆ, ಆರೋಪಿಯು ತಮ್ಮ ಮೇಲೆ 2018ರಲ್ಲಿ ಅತ್ಯಾಚಾರವೆಸಗಿದ್ದಾನೆ ಎಂದು ಈ ವರ್ಷ ಏಪ್ರಿಲ್‌ನಲ್ಲಿ ದೂರು ನೀಡಿದ್ದರು. ಅದಾದ ಬಳಿಕ 28 ವರ್ಷದ ಆರೋಪಿ ತಲೆಮರೆಸಿಕೊಂಡಿದ್ದ. ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 307ರ ಅಡಿಯಲ್ಲಿ (ಕೊಲೆ ಪ್ರಯತ್ನ) ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.