ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PMGSY: ಗ್ರಾಮೀಣ ರಸ್ತೆಗಳ ನಿರ್ಮಾಣ– ಭಾರತಕ್ಕೆ ವಿಶ್ವಬ್ಯಾಂಕ್ ಶ್ಲಾಘನೆ

Last Updated 1 ಫೆಬ್ರುವರಿ 2022, 2:05 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ 2022ರ ಜನವರಿ 18 ರವರೆಗೆಪ್ರಧಾನ್ ಮಂತ್ರಿ ಗ್ರಾಮೀಣ್ ಸಡಕ್ ಯೋಜನಾ ಅಡಿ (ಪಿಎಂಜಿಎಸ್‌ವೈ) 6,84,994 ಕಿಲೋ ಮೀಟರ್ ಅಳತೆಯ1,66,798 ಗ್ರಾಮೀಣ ರಸ್ತೆಗಳು ನಿರ್ಮಾಣವಾಗಿವೆ.

2021–22 ರ ಆರ್ಥಿಕ ಸಮೀಕ್ಷೆ ಈ ಸಂಗತಿಯನ್ನು ಬಹಿರಂಗಗೊಳಿಸಿದೆ. ಇದೇ ವೇಳೆಯಲ್ಲಿಪಿಎಂಜಿಎಸ್‌ವೈ ಅಡಿ6,404 ದಾಟು ಸೇತುವೆಗಳು ನಿರ್ಮಾಣವಾವೆ.

ಇನ್ನು ಇದೇ ಅವಧಿಯಲ್ಲಿ7,82,844 ಕಿಮೀ ಅಳತೆಯ1,82,506 ರಸ್ತೆಗಳು,9,456 ದಾಟು ಸೇತುವೆಗಳು ಮಂಜೂರಾಗಿದ್ದವು. ಗ್ರಾಮೀಣ ಸಾರಿಗೆ ಸಂಪರ್ಕ ಹೆಚ್ಚಿಸುವ ಮೂಲಕ ಗ್ರಾಮೀಣ ಕೃಷಿ ಅಭಿವೃದ್ಧಿಗೆ ಬಲ ನೀಡುವುದುಪಿಎಂಜಿಎಸ್‌ವೈ ಮೂಲ ಆಶಯವಾಗಿದೆ.

2021–22 ರವರೆಗೆ ಪ್ರಧಾನ್ ಮಂತ್ರಿ ಆವಾಸ್ ಯೋಜನಾ– ಗ್ರಾಮೀಣ್ ಅಡಿ 2.63 ಕೋಟಿ ಮನೆಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿತ್ತು. ಇದರಲ್ಲಿ 2.17 ಕೋಟಿ ಮನೆಗಳು ಮಂಜೂರಾಗಿದ್ದು, ಅದರಲ್ಲಿ 1.69 ಕೋಟಿ ಮನೆಗಳು ನಿರ್ಮಾಣಗೊಂಡಿವೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.

ಈ ಯೋಜನೆಯ ಅಡಿ 4,46,058 ಭೂಮಿ ರಹಿತರು ಭೂಮಿ ಪಡೆದಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಈ ಎರಡೂ ಯೋಜನೆಗಳನ್ನೂ ವಿಶ್ವ ಬ್ಯಾಂಕ್ ಶ್ಲಾಘಿಸಿದ್ದು, ಇದು ಗ್ರಾಮೀಣ ಮಟ್ಟದಲ್ಲಿ ಮಾಡುವ ಹೂಡಿಕೆಯ ಸದುಪಯೋಗ ಅಲ್ಲಿನ ಜನಕ್ಕೆ ಆಗುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT