ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಬಳಸುತ್ತಿರುವ ಆಕ್ಸ್‌ಫರ್ಡ್‌ ವಿವಿ ಕೋವಿಶೀಲ್ಡ್‌ ಲಸಿಕೆಗೆ ಪಾಕ್‌ ಅನುಮತಿ

Last Updated 17 ಜನವರಿ 2021, 12:53 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಕೋವಿಡ್‌–19ರ ಚಿಕಿತ್ಸೆ ಸಲುವಾಗಿ ಆಕ್ಸ್‌ಫರ್ಡ್– ಆಸ್ಟ್ರಾಜೆನಿಕಾ ಅಭಿವೃದ್ಧಿ ಪಡಿಸಿರುವ ಲಸಿಕೆ ಬಳಸಲು ಪಾಕಿಸ್ತಾನ ಅನುಮೋದನೆ ನೀಡಿದೆ. ವರ್ಷದ ಮೊದಲ ತ್ರೈಮಾಸಿಕದಲ್ಲಿಯೇ ಲಸಿಕೆ ಬಳಕೆಗೆ ಲಭ್ಯವಾಗಲಿದೆ ಎಂದು ಸರ್ಕಾರ ಆಶಿಸಿದೆ.

ಪ್ರಧಾನಿ ಇಮ್ರಾನ್ ಖಾನ್‌ ಅವರ ವಿಶೇಷ ಸಹಾಯಕ ಡಾ.ಫೈಸಲ್‌ ಸುಲ್ತಾನ್ ಅವರು ಈ ವಿಷಯವನ್ನು ಖಚಿತ ಪಡಿಸಿದ್ದು, ದೇಶದ ಔಷಧ ನಿಯಂತ್ರಣ ಪ್ರಾಧಿಕಾರವು ಲಸಿಕೆ ಬಳಕೆಗೆ ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ನಿರ್ವಹಣಾ ಕೇಂದ್ರದ ಮುಖ್ಯಸ್ಥರೂ ಆದ ಯೋಜನಾ ಸಚಿವ ಅಸದ್ ಉಮರ್, ಮಾರ್ಚ್‌ಗೆ ಲಸಿಕೆ ಲಭ್ಯವಾಗಲಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, 65 ವರ್ಷ ಮೀರಿದ ನಾಗರಿಕರಿಗೆ ನೀಡಲಾಗುವುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT