ಭಾನುವಾರ, ಮಾರ್ಚ್ 26, 2023
24 °C

ಪಾಕಿಸ್ತಾನದಿಂದ ಸ್ವದೇಶಿ ನಿರ್ಮಿತ ರಾಕೆಟ್‌ ವ್ಯವಸ್ಥೆಯ ಯಶಸ್ವಿ ಪರೀಕ್ಷೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಇಸ್ಲಾಮಾಬಾದ್: ಶತ್ರುರಾಷ್ಟ್ರದೊಳಗೆ ನಿಖರವಾಗಿ ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ಸ್ವದೇಶಿ ನಿರ್ಮಿತ ‘ಗೈಡೆಡ್‌ ಮಲ್ಟಿ ಲಾಂಚ್‌ ರಾಕೆಟ್‌’ ವ್ಯವಸ್ಥೆಯ ಪರೀಕ್ಷಾರ್ಥ ಉಡಾವಣೆಯನ್ನು ಪಾಕಿಸ್ತಾನವು ಗುರುವಾರ ಯಶಸ್ವಿಯಾಗಿ ನಡೆಸಿದೆ. 

‘140 ಕಿ.ಮೀ. ದೂರದಲ್ಲಿರುವ ಗುರಿಯನ್ನು ನಿಖರವಾಗಿ ತಲುಪುವ ಸಾಮರ್ಥ್ಯವನ್ನು ‘ಫತಾ–1’ ಹೊಂದಿದೆ ಎಂದು ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗದ ಮೇಜರ್‌ ಜನರಲ್‌ ಬಾಬರ್‌ ಇಫ್ತಿಕಾರ್‌ ಹೇಳಿದರು.

ರಾಷ್ಟ್ರಪತಿ ಆರಿಫ್‌ ಅಲ್ವಿ, ಪ್ರಧಾನಿ ಇಮ್ರಾನ್‌ ಖಾನ್‌, ಸಿಬ್ಬಂದಿ ಸಮಿತಿಯ ಜಂಟಿ ಮುಖ್ಯಸ್ಥ ಜನರಲ್‌ ನದೀಂ ರಾಜಾ ಹಾಗೂ ಸೇನಾ ಮುಖ್ಯಸ್ಥ ಜನರಲ್‌ ಕಮರ್‌ ಜಾವೇದ್‌ ಬಜ್ವಾ ಯಶಸ್ವಿ ಉಡಾವಣೆಗೆ ವಿಜ್ಞಾನಿಗಳಿಗೆ ಹಾಗೂ ಸಂಬಂಧಿಸಿದ ಸೇನಾಪಡೆಗೆ ಅಭಿನಂದನೆ ಸಲ್ಲಿಸಿದ್ದಾರೆ.ಫತಾ–1 ಕುರಿತು ಸೇನೆಯು ಹೆಚ್ಚಿನ ವಿವರವನ್ನು ನೀಡಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು