ರೂಪಾಂತರ ಕೊರೊನಾ ವೈರಸ್ ವಿರುದ್ಧ ‘ಫೈಜರ್ ಲಸಿಕೆ’ ಪರಿಣಾಮಕಾರಿ

ನವದೆಹಲಿ: ಬ್ರಿಟನ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಮೊದಲ ರೂಪಾಂತರ ಕೊರೊನಾ ವೈರಸ್ ಅನ್ನು ಫೈಜರ್ ಲಸಿಕೆ ಪರಿಣಾಮಕಾರಿಯಾಗಿ ತಟಸ್ಥಗೊಳಿಸಲಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ಅಮೆರಿಕದ ಫೈಜರ್ ಮತ್ತು ಜರ್ಮನಿಯ ಬಯೋಎನ್‌ಟೆಕ್ ಕಂಪನಿ ಜಂಟಿಯಾಗಿ ಅಭಿವೃದ್ಧಿ ಪಡಿಸಿರುವ ಫೈಜರ್ ಕೊರೊನಾ ಲಸಿಕೆ ರೂಪಾಂತರ ಕೊರೊನಾವೈರಸ್ ಮೇಲೆ ನಡೆಸಿದ ಈ ಸಂಶೋಧನಾ ಅಧ್ಯಯನ ನೇಚರ್ ಮೆಡಿಸನ್ ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿದೆ.
‘ಎನ್501ವೈ ಮತ್ತು ಇ484ಕೆ ರೂಪಾಂತರಗಳನ್ನು ಹೊಂದಿರುವ ಕೊರೊನಾವೈರಸ್ ವಿರುದ್ಧ ಫೈಜರ್ ಲಸಿಕೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ‘ ಎಂಬುದು ಈ ಅಧ್ಯಯನದಿಂದ ತಿಳಿದುಬಂದಿದೆ.
ಇದನ್ನೂ ಓದಿ... Covid-19 India Updates: 62 ಲಕ್ಷಕ್ಕೂ ಹೆಚ್ಚು ಮಂದಿಗೆ ಕೋವಿಡ್–19 ಲಸಿಕೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.