ಬುಧವಾರ, ಫೆಬ್ರವರಿ 8, 2023
16 °C

ಗಣೇಶ ಚತುರ್ಥಿ: ಜನತೆಗೆ ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಶುಭಾಶಯ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ದೇಶಾದ್ಯಂತ ಶುಕ್ರವಾರ ಗಣೇಶ ಚತುರ್ಥಿಯ ಸಂಭ್ರಮ. ಹಬ್ಬದ ಈ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಜನತೆಗೆ ಶುಭ ಕೋರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಶುಭಕೋರಿದ್ದು, ನಿಮ್ಮೆಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು. ನಿಮ್ಮೆಲ್ಲರಿಗೂ ಜೀವನದಲ್ಲಿ ಸುಖ, ಶಾಂತಿ, ಸೌಭಾಗ್ಯ ಮತ್ತು ಆರೋಗ್ಯ ತರಲಿ. ಗಣಪತಿ ಬಪ್ಪಾ ಮೋರೆಯಾ ಎಂದು ಟ್ವೀಟ್ ಮಾಡಿದ್ದಾರೆ.

ಮತ್ತೊಂದೆಡೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಟ್ವೀಟ್ ಮಾಡಿದ್ದು, ‘ನಾಡಿನ ಸಮಸ್ತ ಜನತೆಗೆ ಶ್ರೀ ಗಣೇಶ ಚತುರ್ಥಿಯ ಭಕ್ತಿಪೂರ್ವಕ ಶುಭಾಶಯಗಳು.

ಶ್ರೀ ಗಣಪತಿಯ ಕೃಪೆ ನಾಡಿನ ಮೇಲೆ ಸದಾ ಇರಲಿ, ಎದುರಾಗಿರುವ ಸಾಂಕ್ರಾಮಿಕದ ಸಂಕಷ್ಟಗಳೂ ಸೇರಿದಂತೆ, ಎಲ್ಲ ಕಷ್ಟ ಆತಂಕಗಳನ್ನು ದೂರಮಾಡಲಿ, ಜನರಿಗೆ ಆರೋಗ್ಯ, ಯಶಸ್ಸು, ಸಂತೋಷ ಸಮೃದ್ಧಿಗಳನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಶುಭಹಾರೈಸಿದ್ದಾರೆ.

ಉಳಿದಂತೆ, ನಾಡಿನ ಗಣ್ಯರು, ಸೆಲೆಬ್ರಿಟಿಗಳು ಕೂಡ ಸಾಮಾಜಿಕ ತಾಣಗಳ ಮೂಲಕ ಜನರಿಗೆ ಶುಭಕೋರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು