ಗುರುವಾರ , ಫೆಬ್ರವರಿ 25, 2021
19 °C

ಗಾಯಕ ಉಸ್ತಾದ್‌ ಖಾನ್‌ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಖ್ಯಾತ ಹಿಂದೂಸ್ತಾನಿ ಗಾಯಕ ಉಸ್ತಾದ್‌ ಗುಲಾಂ ಮುಸ್ತಫಾ ಖಾನ್‌ (89) ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ಖಾನ್ ಭಾನುವಾರ ಮಧ್ಯಾಹ್ನ ಮುಂಬೈನ ಬಾಂದ್ರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು.

ಖಾನ್‌ ನಿಧನಕ್ಕೆ ಟ್ವಿಟರ್‌ನಲ್ಲಿ ಸಂತಾಪ ಸೂಚಿಸಿರುವ ಮೋದಿ, ‘ಉಸ್ತಾದ್‌ ಗುಲಾಂ ಮುಸ್ತಫಾ ಖಾನ್‌ ಅಗಲಿಕೆಯಿಂದ ಸಾಂಸ್ಕೃತಿಕ ಜಗತ್ತು ಬಡವಾಗಿದೆ. ಅವರು ಸಂಗೀತ ಕ್ಷೇತ್ರದಲ್ಲಿ ಹಿರಿಯರಾಗಿದ್ದರು. ಸೃಜನಶೀಲ ವ್ಯಕ್ತಿತ್ವವನ್ನು ಹೊಂದಿದರಾಗಿದ್ದರು. ಖಾನ್ ಬರೆದ ಕೃತಿಗಳು ಹಲವು ತಲೆಮಾರುಗಳಿಗೆ ಮಾದರಿಯಾಗಿವೆ. ಅವರೊಂದಿಗೆ ಸಂವಾದ ನಡೆಸಿದ ಬಗ್ಗೆ ನನಗೆ ಬಹಳ ನೆನಪುಗಳಿವೆ. ಖಾನ್‌ ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳಿಗೆ ಸಂತಾಪ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ... ಹಿಂದೂಸ್ತಾನಿ ಗಾಯಕ ಉಸ್ತಾದ್‌ ಗುಲಾಂ ಮುಸ್ತಫಾಖಾನ್‌ ನಿಧನ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು