ಶನಿವಾರ, ಮಾರ್ಚ್ 25, 2023
22 °C

ರಾಜ್ಯಗಳ ಸಂಸ್ಥಾಪನಾ ದಿನ: ಪ್ರಧಾನಿ ನರೇಂದ್ರ ಮೋದಿ ಶುಭಾಶಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಆಂಧ್ರಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಛತ್ತೀಸ್‌ಗಡ, ಕೇರಳ ಮತ್ತು ಹರಿಯಾಣ ರಾಜ್ಯಗಳ ಸಂಸ್ಥಾಪನಾ ದಿನವಾದ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಗಳ ಜನತೆಗೆ ಶುಭಾಶಯ ಕೋರಿದ್ದಾರೆ. 

ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಆರು ರಾಜ್ಯಗಳ ಜನತೆಗೆ ಪ್ರಧಾನಿ ಮೋದಿ ಶುಭ ಕೋರಿದ್ದಾರೆ. 

ಕರ್ನಾಟಕ ಎಂದು ನಾಮಕರಣವಾದ ಈ ದಿನವನ್ನು ಕರ್ನಾಟಕ ರಾಜ್ಯೋತ್ಸವ ಎಂದು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. 

‘ಹೊಸತನ್ನು ಅರಸುವ ಜನರ ಉತ್ಸಾಹದಿಂದ ಕರ್ನಾಟಕವು ತನ್ನದೇ ಆದ ವಿಶೇಷ ಛಾಪು ಮೂಡಿಸಿದೆ. ಅತ್ಯುತ್ತಮ ಸಂಶೋಧನೆ ಮತ್ತು ಉದ್ಯಮದಲ್ಲಿ ರಾಜ್ಯವು ಮುಂದಿದೆ. ಮುಂದಿನ ದಿನಗಳಲ್ಲಿ ರಾಜ್ಯವು ಯಶಸ್ಸಿನ ಹೊಸ ಉತ್ತುಂಗಕ್ಕೇರಲಿ’ ಎಂದು ಅವರು ಬಣ್ಣಿಸಿದರು. 

‘ಆಂಧ್ರಪ್ರದೇಶದ ಸಹೋದರ–ಸಹೋದರಿಯರಿಗೆ ರಾಜ್ಯದ ಸಂಸ್ಥಾಪನಾ ದಿನದ ಶುಭಾಶಯಗಳು. ರಾಜ್ಯದ ಜನರು ತಮ್ಮ ಕೌಶಲ್ಯ ಮತ್ತು ದೃಢತೆಗೆ ಹೆಸರಾಗಿದ್ದು ಅನೇಕ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿದ್ದಾರೆ. ಅವರಿಗೆ ಸದಾ ಸಂತೋಷ, ಆರೋಗ್ಯ ಮತ್ತು ಯಶಸ್ಸು ದೊರೆಯಲಿ’ ಎಂದು ಟ್ವಿಟರ್‌ನಲ್ಲಿ ಹೇಳಿದ್ದಾರೆ.  

ಕೇರಳದಲ್ಲಿ ಈ ದಿನವನ್ನು ‘ಕೇರಳ ಪಿರವಿ ದಿನ’ ಎಂದು ಆಚರಿಸಲಾಗುತ್ತದೆ. ‘ಕೇರಳ ಜನರ ಎಲ್ಲಾ ಪ್ರಯತ್ನಗಳು ಯಶಸ್ವಿಯಾಗಲಿ’ ಎಂದು ‍ಪ್ರಧಾನಿ ಮೋದಿ ಹಾರೈಸಿದ್ದಾರೆ.

‘ಮಧ್ಯಪ್ರದೇಶ, ಛತ್ತೀಸ್‌ಗಡ ಮತ್ತು ಹರಿಯಾಣ ರಾಜ್ಯಗಳು ತಮ್ಮ ಯಶಸ್ಸಿನ ಪಥದಲ್ಲಿ ಮುಂದುವರೆಯಲಿ’ ಎಂದು ಪ್ರಧಾನಿ ಮೋದಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. 

ಭಾಷಾವಾರು ನೆಲೆಯಲ್ಲಿ 1956 ರಂದು ಆಂಧ್ರಪ್ರದೇಶ, ಮಧ್ಯಪ್ರದೇಶ, ಕರ್ನಾಟಕ ಮತ್ತು ಕೇರಳ ರಾಜ್ಯಗಳು ರಚನೆಯಾದವು.   

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು