ಸೋಮವಾರ, ಜನವರಿ 17, 2022
27 °C

150ಕ್ಕೂ ಹೆಚ್ಚು ಸ್ಟಾರ್ಟಪ್‌ಗಳ ಜತೆ ನಾಳೆ ಪ್ರಧಾನಿ ಮೋದಿ ಸಂವಾದ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಆರೋಗ್ಯ, ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳ 150ಕ್ಕೂ ಹೆಚ್ಚು ನವೋದ್ಯಮಗಳ (ಸ್ಟಾರ್ಟಪ್) ಜತೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಸಂವಾದ ನಡೆಸಲಿದ್ದಾರೆ.

ಉದ್ಯಮ ವ್ಯವಸ್ಥೆಗಳು, ಬಾಹ್ಯಾಕಾಶ, ಕೈಗಾರಿಕೆ, ಭದ್ರತೆ, ಫಿನ್‌ಟೆಕ್ ಕ್ಷೇತ್ರಗಳ ನವೋದ್ಯಮಗಳೂ ಪ್ರಧಾನಿಯವರ ಸಂವಾದದಲ್ಲಿ ಭಾಗವಹಿಸಲಿವೆ ಎಂದು ಪ್ರಧಾನಿ ಕಾರ್ಯಾಲಯ (ಪಿಎಂಒ) ತಿಳಿಸಿದೆ.

150ಕ್ಕೂ ಹೆಚ್ಚು ನವೋದ್ಯಮಗಳನ್ನು 6 ತಂಡಗಳನ್ನಾಗಿ ವಿಂಗಡಿಸಲಾಗಿದ್ದು, ಪ್ರತಿ ತಂಡವೂ ನಿಗದಿತ ವಿಷಯದಲ್ಲಿ ಪ್ರಧಾನಿಯವರ ಮುಂದೆ ವಿಚಾರ ಮಂಡನೆ ಮಾಡಲಿದೆ ಎಂದು ಪಿಎಂಒ ಮಾಹಿತಿ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು