ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಠಾಣೆಯಲ್ಲಿ ಚಿತ್ರೀಕರಣ ಅಪರಾಧವಲ್ಲ: ಬಾಂಬೆ ಹೈಕೋರ್ಟ್‌

Last Updated 29 ಅಕ್ಟೋಬರ್ 2022, 21:15 IST
ಅಕ್ಷರ ಗಾತ್ರ

ಮುಂಬೈ: ಸರ್ಕಾರಿ ಗೋಪ್ಯ ಕಾಯ್ದೆಯಡಿ (ಒಎಸ್‌ಎ) ಪೊಲೀಸ್‌ ಠಾಣೆಯನ್ನು ನಿಷೇಧಿತ ಸ್ಥಳ ಎಂದು ಗುರುತಿಸಿಲ್ಲ. ಹೀಗಾಗಿ ಪೊಲೀಸ್‌ ಠಾಣೆಯೊಳಗೆ ವಿಡಿಯೊ ಚಿತ್ರೀಕರಣ ಮಾಡುವುದು ಅಪರಾಧ ಆಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ ತಿಳಿಸಿದೆ.

ವಾರ್ಧಾಪೊಲೀಸ್‌ ಠಾಣೆಯೊಳಗೆ ಮಾರ್ಚ್‌ 2018ರಂದು ವಿಡಿಯೊ ಚಿತ್ರೀಕರಣ ಮಾಡುವುದರ ಮೂಲಕ ರವೀಂದ್ರ ಉಪಾಧ್ಯಾಯ ಎಂಬುವರು ಒಎಸ್‌ಎ ಕಾಯ್ದೆ ಉಲ್ಲಂಘಿಸಿದ್ದಾರೆಎಂಬ ಆರೋಪದ ಪ್ರಕರಣವನ್ನು ನ್ಯಾಯಮೂರ್ತಿಗಳಾದ ಮನಿಷ್‌ ಪಿತಾಳೆ ಮತ್ತು ವಾಲ್ಮಿಕಿ ಮೆನೇಜಸ್‌ ಅವರ ವಿಭಾಗೀಯ ಪೀಠ ಇತ್ತೀಚೆಗೆ ರದ್ದುಗೊಳಿಸಿದೆ.

ಒಎಸ್‌ಎಯ ಸೆಕ್ಷನ್‌ 3 ಮತ್ತು 2 (8)ರಲ್ಲಿ ಬೇಹುಗಾರಿಕೆಗೆ ಸಂಬಂಧಿಸಿದ ನಿಷೇಧಿತ ಸ್ಥಳಗಳಲ್ಲಿ ಪೊಲೀಸ್‌ ಠಾಣೆಯನ್ನು ಉಲ್ಲೇಖಿಸಿಲ್ಲ ಎಂದಿರುವ ಹೈಕೋರ್ಟ್‌, ಅದನ್ನು ‘ನಿಷೇಧಿತ ಸ್ಥಳ’ ಎಂಬ ವ್ಯಾಖ್ಯಾನದಲ್ಲಿ ಸೇರಿಸಬಹುದು ಎಂದು ‌ಆದೇಶದಲ್ಲಿ ಹೇಳಿದೆ.

ನೆರೆ ಹೊರೆಯವರೊಂದಿಗೆಜಗಳಕ್ಕೆ ಸಂಬಂಧಿಸಿ ಉಪಾಧ್ಯಾಯ ಅವರು ತನ್ನ ಪತ್ನಿಯೊಂದಿಗೆ ವಾರ್ಧಾ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಇದೇ ವೇಳೆ ಅವರ ವಿರುದ್ಧವೂ ಪ್ರತಿ ದೂರು ದಾಖಲಾಯಿತು. ಈ ಸಂದರ್ಭದಲ್ಲಿ ಠಾಣೆಯಲ್ಲಿ ನಡೆಯುತ್ತಿದ್ದ ಚರ್ಚೆಯನ್ನು ಉಪಾಧ್ಯಾಯ ವಿಡಿಯೊ ಚಿತ್ರೀಕರಣ ಮಾಡುತ್ತಿದ್ದರು. ಇದನ್ನು ಗಮನಿಸಿದ ಪೊಲೀಸರು ಅವರ ವಿರುದ್ಧಒಎಸ್‌ಎ ಕಾಯ್ದೆ ಉಲ್ಲಂಘನೆಯಡಿ ಎಫ್‌ಐಆರ್‌ ದಾಖಲಿಸಿ, ಆರೋಪಪಟ್ಟಿ ಸಲ್ಲಿಸಿದ್ದರು. ಅದನ್ನು ನ್ಯಾಯಾಲಯ ರದ್ದುಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT