ಸೋಮವಾರ, ಜೂನ್ 21, 2021
27 °C

ಪ್ರಣವ್ ಮುಖರ್ಜಿ ಆರೋಗ್ಯ ಸ್ಥಿತಿ ಗಂಭೀರ: ವೆಂಟಿಲೇಟರ್ ಚಿಕಿತ್ಸೆ ಮುಂದುವರಿಕೆ

ಎಎನ್ಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಆರೋಗ್ಯ ಸ್ಥಿತಿಯು ಗಂಭೀರವಾಗಿಯೇ ಇದೆ ಎಂದು ಸೋಮವಾರ ಬೆಳಿಗ್ಗೆ ದೆಹಲಿಯ ಸೇನಾ ಸಂಶೋಧನೆ ಮತ್ತು ರೆಫೆರಲ್ ಆಸ್ಪತ್ರೆ ತಿಳಿಸಿದೆ. 

ಸೇನಾ ಆಸ್ಪತ್ರೆಯ ಪ್ರಕಾರ, 'ಪ್ರಣವ್ ಮುಖರ್ಜಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸದ್ಯ ಅವರು ವೆಂಟಿಲೇಟರ್ ನೆರವನ್ನು ಪಡೆಯುತ್ತಿದ್ದಾರೆ. ಅವರ ಮೇಲೆ ಸೂಕ್ಷ್ಮವಾಗಿ ನಿಗಾ ವಹಿಸಲಾಗುತ್ತಿದೆ' ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: 

ಆಗಸ್ಟ್ 10 ರಂದು ಮಿದುಳು ಶಸ್ತ್ರಚಿಕಿತ್ಸೆಗೆ ಒಳಗಾದ ಮಾಜಿ ರಾಷ್ಟ್ರಪತಿಗಳ ಆರೋಗ್ಯ ಸ್ಥಿತಿ ಸುಧಾರಿಸಿದೆ ಮತ್ತು ಸ್ಥಿರವಾಗಿದೆ ಎಂದು ಪ್ರಣವ್ ಮುಖರ್ಜಿ ಅವರ ಪುತ್ರ ಅಭಿಜಿತ್ ಮುಖರ್ಜಿ  ನಿನ್ನೆ (ಭಾನುವಾರ) ಮಾಹಿತಿ ನೀಡಿದ್ದರು.

ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಪ್ರಣವ್ ಅವರೇ, ತಮಗೆ ಕೋವಿಡ್-19 ಸೋಂಕು ತಗುಲಿರುವುದಾಗಿ ತಿಳಿಸಿದ್ದರು ಮತ್ತು ತಮ್ಮನ್ನು ಸಂಪರ್ಕಿಸಿದ್ದವರು ಕೂಡಲೇ ಕ್ವಾರಂಟೈನ್ ಆಗುವಂತೆ ಮನವಿ ಮಾಡಿದ್ದರು.

ಇನ್ನಷ್ಟು...

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು