ಶುಕ್ರವಾರ, ಮೇ 14, 2021
32 °C

ಕೋವಿಡ್ ಲಸಿಕೆ ಕೊರತೆಯಿಲ್ಲ, ಯೋಜನೆ ರೂಪಿಸುವಲ್ಲಿ ಸಮಸ್ಯೆಯಿದೆ: ಕೇಂದ್ರ

ಪಿಟಿಐ‌ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್–19 ಲಸಿಕೆ ಕೊರತೆ ಸಮಸ್ಯೆಯಲ್ಲ. ಬದಲಿಗೆ ಸರಿಯಾದ ಯೋಜನೆ ರೂಪಿಸುವಲ್ಲಿ ಸಮಸ್ಯೆ ಇದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ.

ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಬಳಿ ಸುಮಾರು 1.67 ಕೋಟಿ ಡೋಸ್ ಲಸಿಕೆ ಲಭ್ಯವಿವೆ ಎಂದೂ ಕೇಂದ್ರ ಹೇಳಿದೆ.

‘ಈವರೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು 13,10,90,370 ಡೋಸ್‌ ಲಸಿಕೆಗಳನ್ನು ಸ್ವೀಕರಿಸಿವೆ. ಇವುಗಳಲ್ಲಿ ವ್ಯರ್ಥವಾಗಿರುವುದೂ ಸೇರಿದಂತೆ 11,43,69,677 ಡೋಸ್ ಬಳಕೆಯಾಗಿವೆ.

ಓದಿ: 

‘ಮಂಗಳವಾರ ಬೆಳಿಗ್ಗೆ 11 ಗಂಟೆವರೆಗಿನ ಲೆಕ್ಕಾಚಾರ ಪ್ರಕಾರ, 1,67,20,693 ಡೋಸ್ ಲಸಿಕೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿ ಇವೆ. ಈಗಿನಿಂದ ಏಪ್ರಿಲ ಕೊನೆಯ ವರೆಗೆ 2,01,22,960 ಡೋಸ್‌ಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಕೆಯಾಗಲಿವೆ’ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು