ಚಂಡೀಗಢ: ರಾಜ್ಯದ ಎಲ್ಲ ಸರ್ಕಾರಿ ಕಟ್ಟಗಳಿಗೆ ಸೌರ ಫಲಕ ಅಳವಡಿಸುವ ಪ್ರಕ್ರಿಯೆ ತ್ವರಿತಗೊಳಿಸುವಂತೆ ನವೀಕರಿಸಬಹುದಾದ ಇಂಧನ ಮೂಲಗಳ ಸಚಿವ ಅಮನ್ ಅರೋರ ಎಲ್ಲ ಇಲಾಖೆ ಮುಖ್ಯಸ್ಥರಿಗೆ ನಿರ್ದೇಶನ ನೀಡಿದ್ದಾರೆ.

ವರ್ಚುವಲ್ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ಇಲಾಖೆಗಳ ಕಟ್ಟಡದಲ್ಲಿ ಸೌರ ಫಲಕ ಅಳವಡಿಕೆ ಪ್ರಕ್ರಿಯೆ ಮತ್ತಷ್ಟು ಸುಗಮಗೊಳಿಸಲು ಪಂಜಾಬ್ ಇಂಧನ ಅಭಿವೃದ್ಧಿ ನಿಗಮದೊಂದಿಗಿನ(ಪೆಡ) ಸಮನ್ವಯಕ್ಕಾಗಿ ತಮ್ಮ ಇಲಾಖೆಗಳ ಹಿರಿಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ರಾಜ್ಯದ ಜನರಿಗೆ ಶುದ್ಧ ಪರಿಸರದ ಭರವಸೆಗಾಗಿ ಶುದ್ಧ ಇಂಧನ ಮೂಲ ಸೌಕರ್ಯವನ್ನು ಬಲಪಡಿಸಲು ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ. ಈ ಪರಿಸರ ಸ್ನೇಹಿ ಕ್ರಮ ಕಾರ್ಬನ್ ರಹಿತವಾಗಿ ವಿದ್ಯುತ್ ನೀಡುತ್ತದೆ. ಸೌರಶಕ್ತಿ ನವೀಕರಿಸಬಹುದಾದ ಶಕ್ತಿಯ ಅತ್ಯಂತ ಆದ್ಯತೆಯ ಮೂಲವಾಗಿದೆ ಎಂದರು.

ನವೀಕರಿಸಬಹುದಾದ ಇಂಧನ ಸೇವೆಗಳ ಕಂಪನಿ ಅಡಿಯಲ್ಲಿ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು ಮತ್ತು ಪಂಜಾಬ್ ಇಂಧನ ಅಭಿವೃದ್ಧಿ ನಿಗಮ ಈಗಾಗಲೇ ವಿವಿಧ ಸರ್ಕಾರಿ ಕಟ್ಟಡಗಳ ಮೇಲ್ಛಾವಣಿಯ ಮೇಲೆ ಒಟ್ಟು 88 ಮೆಗಾವ್ಯಾಟ್ ಸಾಮರ್ಥ್ಯದ ಸೌರ ಫಲಕ ಸ್ಥಾಪಿಸಿದೆ ಎಂದು ಅರೋರಾ ಹೇಳಿದರು.

ಈ ಯೋಜನೆಯು ಆಯಾ ಇಲಾಖೆಗಳ ವಿದ್ಯುತ್ ಬಿಲ್‌ಗಳ ಆರ್ಥಿಕ ಹೊರೆಯನ್ನು ಸರಿಸುಮಾರು 40 ರಿಂದ 50 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ. ವಿದ್ಯುತ್ ಬಿಲ್‌ಗಳಿಂದ ಉಳಿತಾಯವಾಗುವ ಮೊತ್ತವನ್ನು ಸಾರ್ವಜನಿಕ ಕಾರ್ಯಗಳಿಗೆ ಬಳಸಲಾಗುವುದು ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.