ನವದೆಹಲಿ: ಪ್ರತಿಕೂಲ ಹವಾಮಾನದ ನಡುವೆಯೂ 24 ಗಂಟೆಗಳ ಅವಧಿಯೊಳಗೆ 12 ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲುಗಳು 969 ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು 6 ರಾಜ್ಯಗಳಿಗೆ ಸಾಗಿಸಿವೆ ಎಂದು ಬುಧವಾರ ರೈಲ್ವೆ ಇಲಾಖೆಯು ತಿಳಿಸಿದೆ.

ಮೂರು ರೈಲುಗಳು ತಮಿಳುನಾಡನ್ನು, ನಾಲ್ಕು ರೈಲುಗಳು ಆಂಧ್ರಕ್ಕೆ, ತಲಾ ಒಂದೊಂದು ರೈಲುಗಳು ದೆಹಲಿ, ಮಧ್ಯಪ್ರದೇಶ, ಉತ್ತರ ಪ್ರದೇಶ, ಅಸ್ಸಾಂ ಮತ್ತು ಕೇರಳಕ್ಕೆ ತಲುಪಿವೆ. ಈ ರೈಲುಗಳು ಒಡಿಶಾ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ರಾಜ್ಯಗಳಿಂದ ಆಮ್ಲಜನಕವನ್ನು ಸಂಗ್ರಹಿಸಿಕೊಂಡು ನಿಗದಿತ ಸ್ಥಳಗಳಿಗೆ ತಲುಪಿವೆ ಎಂದೂ ಇಲಾಖೆ ಮಾಹಿತಿ ನೀಡಿದೆ.

ಉತ್ತರ ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಿಗೆ ಬುಧವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ 130ರಿಂದ 140 ಕಿ.ಮೀ. ಗಾಳಿಯ ವೇಗದಲ್ಲಿ ಯಸ್ ಚಂಡಮಾರುತ ಅಪ್ಪಳಿಸಿತ್ತು. ಇದರ ನಡುವೆಯೇ ಈ ರಾಜ್ಯಗಳಲ್ಲಿ ಸಮುದ್ರತೀರದ ಪಟ್ಟಣ ಪ್ರದೇಶಗಳನ್ನು ಹಾದು ಬಂದ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲುಗಳು ಸುಮಾರು ಪ್ರತಿಕೂಲ ಹವಾಮಾನ ಪರಿಸ್ಥಿತಿಯ ನಡುವೆಯೇ ತಮ್ಮ ಗಮ್ಯಸ್ಥಾನಗಳಿಗೆ ತಲುಪಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.