ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೊಕೊ ಪೈಲಟ್‌, ಗಾರ್ಡ್‌ ಸೇವೆ ಖಾಸಗಿ ರೈಲುಗಳಿಗೂ ವಿಸ್ತರಣೆ: ರೈಲ್ವೆ ಇಲಾಖೆ

ಭಾರತೀಯ ರೈಲ್ವೆ ಹೇಳಿಕೆ
Last Updated 28 ಮಾರ್ಚ್ 2021, 12:46 IST
ಅಕ್ಷರ ಗಾತ್ರ

ನವದೆಹಲಿ: ಖಾಸಗಿ ಒಡೆತನದ ಪ್ರಯಾಣಿಕ ರೈಲುಗಳಲ್ಲಿ ಸೇವೆ ಸಲ್ಲಿಸಲು ತನ್ನ ಲೊಕೊಪೈಲಟ್‌, ಗಾರ್ಡ್‌ಗಳಿಗೆ ಅನುಮತಿ ನೀಡಲಾಗುವುದು ಎಂದು ಭಾರತೀಯ ರೈಲ್ವೆ ಹೇಳಿದೆ.

ಪ್ರಯಾಣಿಕ ರೈಲುಗಳನ್ನು ಓಡಿಸಲು ಖಾಸಗಿ ವಲಯಕ್ಕೆ ಅನುಮತಿ ನೀಡಿದ ಕಾರಣ ಉದ್ಯೋಗ ಕಳೆದುಕೊಳ್ಳುವ ಆತಂಕ ರೈಲ್ವೆ ನೌಕರರಲ್ಲಿ ಮನೆ ಮಾಡಿತ್ತು. ಈಗ ಭಾರತೀಯ ರೈಲ್ವೆಯ ಈ ಹೇಳಿಕೆಯಿಂದ ನೌಕರರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

‘ಸಾರ್ವಜನಿಕ–ಖಾಸಗಿ ಸಹಭಾಗಿತ್ವದಡಿ ಖಾಸಗಿ ಕಂಪನಿಗಳು ಪ್ರಯಾಣಿಕ ರೈಲು ಸೇವೆ ಆರಂಭಿಸಲು ಅನುಮತಿ ನೀಡಲಾಗಿದೆ. ಆದರೆ, ರೈಲುಗಳ ನಿರ್ವಹಣೆ ಜವಾಬ್ದಾರಿ ಖಾಸಗಿಯವರದಾಗಿರಲಿದ್ದು, ರೈಲು ಚಾಲಕ, ಗಾರ್ಡ್‌ಗಳನ್ನು ರೈಲ್ವೆಯೇ ಒದಗಿಸುವುದು’ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದರು.

‘ಬೋಗಿಗಳ ಸ್ವಚ್ಛತೆ ಕಾಪಾಡುವುದು, ಆಹಾರ ಪೂರೈಕೆ ಹಾಗೂ ಪ್ರಯಾಣಿಕರಿಗೆ ಕೆಲವು ಅಗತ್ಯ ಸೇವೆಗಳನ್ನು ಒದಗಿಸುವುದು ಖಾಸಗಿಯವರ ಜವಾಬ್ದಾರಿಯಾಗಿರಲಿದೆ’ ಎಂದೂ ಅವರು ಹೇಳಿದರು.

ದೇಶದ 109 ಮಾರ್ಗಗಳಲ್ಲಿ 151 ಖಾಸಗಿ ರೈಲುಗಳ ಸಂಚಾರಕ್ಕೆ ಅನುಮತಿ ನೀಡಲಾಗುತ್ತಿದೆ. ಜೂನ್‌ 30 ಒಳಗಾಗಿ ಬಿಡ್‌ ಸಲ್ಲಿಸುವಂತೆ ಸೂಚಿಸಲಾಗಿದೆ.

ಜಿಎಂಆರ್‌, ಐಆರ್‌ಸಿಟಿಸಿ, ಆರ್‌ಕೆ ಅಸೋಸಿಯೇಟ್ಸ್‌, ಪಿಎನ್‌ಸಿ ಇನ್‌ಫ್ರಾಟೆಕ್‌, ಐಆರ್‌ಬಿ ಇನ್‌ಫ್ರಾ ಹಾಗೂ ಮೇಧಾ ಕಂಪನಿಗಳು ರೈಲುಗಳ ಕಾರ್ಯಾಚರಣೆಗೆ ಆಸಕ್ತಿ ತೋರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT