ಶನಿವಾರ, ಸೆಪ್ಟೆಂಬರ್ 26, 2020
22 °C

ರಾಜಸ್ಥಾನ ರಾಜಕಾರಣ: ಅಧಿವೇಶನ ಆರಂಭ, ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

rajasthan

ಜೈಪುರ: ರಾಜಸ್ಥಾನದಲ್ಲಿ ಆಡಳಿತದಲ್ಲಿರುವ ಅಶೋಕ್‌ ಗೆಹ್ಲೋಟ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಇಂದು ಬಿಜೆಪಿ ಅವಿಶ್ವಾಸ ನಿರ್ಣಯವನ್ನು ಮಂಡಿಸಲಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೂಡಾ ಅಧಿವೇಶನದ ಆರಂಭದಲ್ಲೇ‌ ವಿಶ್ವಾಸ ಮತಯಾಚನೆ ನಿರ್ಣಯ ಮಂಡಿಸಲಿದೆ. 

ಕಳೆದೊಂದು ತಿಂಗಳಿನಿಂದ ರಾಜಸ್ಥಾನ ಕಾಂಗ್ರೆಸ್‌ನಲ್ಲಿನ ಬಿಕ್ಕಟ್ಟು ‘ಸೌಹಾರ್ದಯುತ ಪರಿಹಾರ’ ಪಡೆದ ಕೆಲ ದಿನಗಳ ನಂತರ ವಿರೋಧ ಪಕ್ಷ ಈ ತೀರ್ಮಾನ ಕೈಗೊಂಡಿದೆ. ಕಳೆದ ತಿಂಗಳು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ವಿರುದ್ಧ ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ ಹಾಗೂ ಅವರ ಬೆಂಬಲಿಗರಾದ 18 ಕಾಂಗ್ರೆಸ್‌ ಶಾಸಕರು ಬಂಡಾಯವೆದ್ದಿದ್ದರು. ಇದಾದ ಬೆನ್ನಲ್ಲೇ ಪೈಲಟ್‌ ಅವರನ್ನು ಉಪಮುಖ್ಯಮಂತ್ರಿ ಹಾಗೂ ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿತ್ತು.

 ಕ್ಷಣ ಕ್ಷಣದ ಮಾಹಿತಿ

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಸಚಿವ ಶಾಂತಿ ಧರಿವಾಲ್, ರಾಜಸ್ಥಾನದಲ್ಲಿ ಶಾ ಅವರ ಅಧಿಕಾರವಾಗಲೀ, ಅಧಿಕಾರಶಾಹಿಯಾಗಲೀ ನಡೆಯಲ್ಲ ಎಂದು ಹೇಳಿದ್ದಾರೆ. ಅಮಿತ್ ಶಾ ಹೆಸರು ಬಳಸಿದ್ದಕ್ಕೆ  ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ

ರಾಜಸ್ಥಾನ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್  ವಾಗ್ದಾಳಿ ನಡೆಸಿದೆ. ಗಜೇಂದ್ರ ಶೆಖಾವತ್ ಅವರು ರಾಜಸ್ಥಾನದ ಮುಂದಿನ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ ಎಂದು ಅವರ ಹೆಸರು ಉಲ್ಲೇಖಿಸದೆಯೇ ಶಾಂತಿ ಧರಿವಾಲ್ ಅವರು ವಾಗ್ದಾಳಿ ನಡೆಸಿದ್ದಾರೆ.

ವಿಶ್ವಾಸ ಮತಯಾಚನೆ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮುಂದುವರಿದಿದ್ದು 3 ಗಂಟೆಗಳ ಕಾಲಾವಕಾಶವನ್ನು ಸ್ಪೀಕರ್ ಜೋಷಿ ನೀಡಿದ್ದಾರೆ

ರಾಜಸ್ಥಾನ ವಿಧಾನಸಭೆ ಅಧಿವೇಶನ ಮಧ್ಯಾಹ್ನ 1ಗಂಟೆಗೆ ಆರಂಭವಾಗಿದ್ದು, ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರ ವಿಶ್ವಾಸ ಮತಯಾಚನೆಗೆ ಸಿದ್ಧವಾಗಿದೆ.

ರಾಜಸ್ಥಾನ ವಿಧಾನಸಭೆಯ ಕಾಂಗ್ರೆಸ್ ಮುಖ್ಯ ಸಚೇತಕ ಮಹೇಶ್  ಜೋಶಿ ಅವರು ವಿಶ್ವಾಸಮತ ಯಾಚನೆಗಾಗಿರುವ ಮನವಿಯನ್ನು ಸ್ಪೀಕರ್ ಸಿಪಿ ಜೋಶಿ ಅವರ ಮುಂದೆ  ಸಲ್ಲಿಸಿದ್ದಾರೆ. ಈ ಬಗ್ಗೆ ಸ್ಪೀಕರ್ ಜೋಶಿ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಿದ್ದಾರೆ.

ವಿಧಾನಸಭೆ ಅಧಿವೇಶನವನ್ನು ಮಧ್ಯಾಹ್ನ 1 ಗಂಟೆವರೆಗೆ ಮುಂದೂಡಲಾಗಿದೆ. ಅಧಿವೇಶನ ಆರಂಭವಾಗಿ ಒಂದು ನಿಮಿಷದ ನಂತರ ಕಲಾಪ ಮುಂದೂಡಿರುವುದಾಗಿ ಸ್ಪೀಕರ್ ಸಿ.ಪಿ ಜೋಷಿ ಹೇಳಿದ್ದು, ವಿಪಕ್ಷಗಳ ಅವಿಶ್ವಾಸ ನಿರ್ಣಯ ಮಂಡನೆ, ಗೆಹ್ಲೋಟ್ ಸರ್ಕಾರದ ವಿಶ್ವಾಸ ಮತ ಯಾಚನೆ ಮಧ್ಯಾಹ್ನ ನಂತರ ನಡೆಯಲಿದೆ.

ವಿಧಾನಸಭೆ ಅಧಿವೇಶನ ಇಂದು ಆರಂಭವಾಗಲಿದ್ದು ಇಲ್ಲಿ ರಾಜಸ್ಥಾನದ ಜನರ ಮತ್ತು ಕಾಂಗ್ರೆಸ್ ಶಾಸಕರ ಒಗ್ಗಟ್ಟು ಗೆಲುವು ಸಾಧಿಸಲಿದೆ. ಇದು ಸತ್ಯದ ಗೆಲುವು ಆಗಿಲಿದೆ. ಸತ್ಯವೇವ ಜಯತೇ ಎಂದು ಅಶೋಕ್ ಗೆಹ್ಲೋಟ್ ಟ್ವೀಟಿಸಿದ್ದಾರೆ.

ನಾವು ವಿಶ್ವಾಸ ಮತವನ್ನು ಗಳಿಸುತ್ತೇವೆ. ನಮಗೆ ಹೆಚ್ಚಿನ ಬಹುಮತವಿದೆ ಎಂದು ರಾಜಸ್ಥಾನ ಸಚಿವ ಶಾಂತಿ ಧಾರಿವಾಲ್ ಹೇಳಿದ್ದಾರೆ.

ವಿಧಾನಸಭೆಗೆ ತಲುಪಿದ ಸಚಿನ್ ಪೈಲಟ್, ಸ್ಪೀಕರ್ 
ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ರಾಜಸ್ಥಾನ ವಿಧಾನಸಭೆಗೆ ಆಗಮಿಸಿದ್ದಾರೆ. ಹೋಟೆಲ್ ಫೇರ್‌ಮಾಂಟ್‌ನಲ್ಲಿ ಬೀಡುಬಿಟ್ಟಿದ್ದ ಕಾಂಗ್ರೆಸ್ ನಾಯಕರು ಕೂಡ ರಾಜಸ್ಥಾನ ವಿಧಾನಸಭೆಗೆ ಆಗಮಿಸಿದ್ದಾರೆ ಎಂದು ನ್ಯೂಸ್ 18 ವರದಿ ಮಾಡಿದೆ. ಏತನ್ಮಧ್ಯೆ, ರಾಜಸ್ಥಾನ ವಿಧಾನಸಭಾ ಸ್ಪೀಕರ್ ಸಿಪಿ ಜೋಶಿ ಕೂಡಾ ವಿಧಾನಸಭೆ ತಲುಪಿದ್ದಾರೆ 
 

ರಾಜಸ್ಥಾನ ವಿಧಾನಸಭೆ: ಸಂಖ್ಯಾ ಬಲ
 ಆಡಳಿತರೂಢ ಪಕ್ಷ 
 ಕಾಂಗ್ರೆಸ್ -107 (ಪೈಲಟ್ ಬೆಂಬಲಿಗರು-19,  ಬಿಎಸ್‌ಪಿ- 6)  
ಆರ್‌ಎಲ್‌ಡಿ -1
ಸ್ವತಂತ್ರರು- 13
ಬಿಟಿಪಿ-2
ಎಡಪಕ್ಷ-  2

ವಿರೋಧಪಕ್ಷದಲ್ಲಿರುವವರು
 ಶಾಸಕರು-75
 ಬಿಜೆಪಿ-72
ಆರ್‌ಎಲ್‌ಪಿ-3 

ಇನ್ನಷ್ಟು: 

ಗೆಹ್ಲೋಟ್ ವಿರುದ್ಧ ಮತ ಚಲಾಯಿಸಲು ಬಿಎಸ್‌ಪಿ ಶಾಸಕರಿಗೆ ವಿಪ್ ಜಾರಿ ಮಾಡಿದ ಮಾಯಾವತಿ
ರಾಜಸ್ಥಾನ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡನೆ ಇಂದು
ರಾಜಸ್ಥಾನ ರಾಜಕಾರಣ: ಅಶೋಕ್ ಗೆಹ್ಲೋಟ್ ಭೇಟಿಯಾದ ಸಚಿನ್ ಪೈಲಟ್
ಬ್ರಾಹ್ಮಣರನ್ನು ಮತ್ತೆ ಬಿಎಸ್‌ಪಿ ತೆಕ್ಕೆಗೆ ತರಬಲ್ಲುದೇ 'ಪರಶುರಾಮ' ರಾಜಕಾರಣ
ರಾಜಸ್ಥಾನ ಸರ್ಕಾರದ ವಿರುದ್ಧ ನಾಳೆ ಅವಿಶ್ವಾಸ ನಿರ್ಣಯ ಮಂಡನೆಗೆ ಬಿಜೆಪಿ ನಿರ್ಧಾರ
ಪ್ರಜಾಪ್ರಭುತ್ವದ ರಕ್ಷಣೆಗೆ ಈ ಹೋರಾಟ: ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು