ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜನಿ ರಾಜಕೀಯ ಭವಿಷ್ಯವೇನು? ಪ್ರಶ್ನೆಗಳನ್ನು ಹುಟ್ಟುಹಾಕಿದೆ ಸೂಪರ್‌ಸ್ಟಾರ್‌ ಪತ್ರ

Last Updated 29 ಅಕ್ಟೋಬರ್ 2020, 9:32 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡಿನ ವಿಧಾನಸಭೆಗೆ 2021ರಲ್ಲಿ ನಡೆಯಲಿರುವ ಚುನಾವಣೆಯ ಮೂಲಕ ರಾಜಕೀಯ ಮಾಡುವುದಾಗಿ ಹೇಳಿದ್ದ ರಜನಿಕಾಂತ್‌ ಅವರ ಮೂರು ವರ್ಷಗಳ ಹಿಂದಿನ ಮಾತು ಕಾರ್ಯರೂಪಕ್ಕೆ ಬಾರದೇ ಇರಬಹುದಾದ ಮುನ್ಸೂಚನೆಯನ್ನು ಸ್ವತಃ ಸೂಪರ್‌ಸ್ಟಾರ್‌ ರಜನಿ ಗುರುವಾರ ನೀಡಿದ್ದಾರೆ.

ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲು ಇನ್ನು ಕೇವಲ ಏಳು ತಿಂಗಳುಗಳು ಬಾಕಿ ಉಳಿದಿವೆ. ಇಂಥ ಸನ್ನಿವೇಶದಲ್ಲಿ ರಜನಿಕಾಂತ್‌ ಅವರದ್ದು ಎನ್ನಲಾದ ಪತ್ರವೊಂದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು, ವದಂತಿ ಸೃಷ್ಟಿಯಾಗಿದೆ. ಅದನ್ನು ಹತ್ತಿಕ್ಕಲು ರಜನಿ ತಮ್ಮ ಅಧಿಕೃತ ಟ್ವಿಟರ್ ಖಾತೆ ಮೂಲಕ ಗುರುವಾರ ಸ್ಪಷ್ಟನೆಯನ್ನೇನೋ ನೀಡಿದ್ದಾರೆ. ಆದರೆ ಈ ಸ್ಪಷ್ಟನೆಯು ನಟನ ರಾಜಕೀಯ ಪ್ರವೇಶದ ಕುರಿತು ಪ್ರಶ್ನೆಗಳು ಏಳುವಂತೆ ಮಾಡಿವೆ!

'ನನ್ನ ಹೆಸರಿನಲ್ಲಿ ಪತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಅದು ನನ್ನದಲ್ಲ ಎಂದು ಎಲ್ಲರಿಗೂ ತಿಳಿದಿದೆ. ಆದರೆ, ನನ್ನ ಆರೋಗ್ಯದ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿರುವ ವಿವರಗಳು ನಿಜ. ನನ್ನ ರಾಜಕೀಯ ನಿಲುವಿನ ಬಗ್ಗೆ ಸೂಕ್ತ ಸಂದರ್ಭದಲ್ಲಿ 'ರಜನಿ ಮಕ್ಕಳ್‌ ಮಂದಿರಂ'ನ ಪ್ರಮುಖರನ್ನು ಸೂಕ್ತ ಸಮಯದಲ್ಲಿ ಸಂಪರ್ಕಿಸಿ ನಿರ್ಧಾರ ಪ್ರಕಟಿಸುತ್ತೇನೆ,' ಎಂದು ಹೇಳಿದ್ದಾರೆ.

'ರಾಜಕೀಯಕ್ಕೆ ಬರುವ ದಿನಾಂಕ ಘೋಷಣೆ ಮಾಡಲು ಆಗದೇ ಇರುವುದಕ್ಕೆ ತಮ್ಮ ಆರೋಗ್ಯದ ಸಮಸ್ಯೆ ಕಾರಣ,' ಎಂದು ರಜನಿಕಾಂತ್‌ ಅವರು ತಮ್ಮ ಆಪ್ತರು ಮತ್ತು ಸ್ನೇಹಿತರಿಗೆ ಬರೆದಿದ್ದರು ಎನ್ನಲಾದ ಪತ್ರವೊಂದು ಸಾಮಾಜಿಕ ತಾಣಗಳಲ್ಲಿ ಬುಧವಾರ ಕಾಳ್ಗಿಚ್ಚಿನಂತೆ ಹರಡಿತ್ತು. 'ರಜನಿಕಾಂತ್‌ ಅವರಿಗೆ ಕೋವಿಡ್‌ನಿಂದ ಅಪಾಯ ಸಂಭವಿಸಬಹುದಾದ ಸಾಧ್ಯತೆಗಳಿರುವುದರಿಂದ ವೈದ್ಯರ ಸಲಹೆ ಮೇರೆಗೆ ಅವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ,' ಎಂದು ಪತ್ರದಲ್ಲಿ ಹೇಳಲಾಗಿತ್ತು. ಇದೇ ಹಿನ್ನೆಲೆಯಲ್ಲಿ ರಜನಿಕಾಂತ್‌ ಇಂದು ಸ್ಪಷ್ಟನೆ ನೀಡಿದ್ದಾರೆ.

ಏಳು ತಿಂಗಳ ಹಿಂದೆ ಪಕ್ಷದ ಸಭೆಯಲ್ಲಿ ಸಿನಿಮಾ ಶೈಲಿಯಲ್ಲಿ ಮಾತನಾಡಿದ್ದ ರಜನಿಕಾಂತ್‌ ತಮಿಳುನಾಡಿನಲ್ಲಿ ರಾಜಕೀಯ ಬದಲಾವಣೆ ತರುವಮಾತುಗಳನ್ನಾಡಿದ್ದರು.

'ನನ್ನ ಸಂದೇಶವನ್ನು ಜನರ ಬಳಿಗೆ, ರಾಜ್ಯದ ಮೂಲೆ ಮೂಲೆಗಳಿಗೆ ಕೊಂಡೊಯ್ಯಿರಿ. ನಾನು ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸುವುದನ್ನು ನಿಲ್ಲಿಸಿ. ನನ್ನ ಆಲೋಚನೆಗಳ ಬಗ್ಗೆ ಜನರಿಗೆ ತಿಳಿಸಿ. ನನ್ನ ಪರವಾದ ಬದಲಾವಣೆಯ ಅಲೆಗಳನ್ನು ಸೃಷ್ಟಿ ಮಾಡಿ. ಅಂದು ನಾನು ಬರುವೆ, ಅಂದು ನಾನು ಬಂದೇ ಬರುವೆ,' ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT