ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಾಸವಿಲ್ಲ, ನೋವಿಲ್ಲ... ಕೋವಿಡ್‌ ಲಸಿಕೆ ಪಡೆದ ರತನ್‌ ಟಾಟಾ ಅಭಿಮತ

Last Updated 13 ಮಾರ್ಚ್ 2021, 9:14 IST
ಅಕ್ಷರ ಗಾತ್ರ

ನವದೆಹಲಿ: ಉದ್ಯಮಿ, ಟಾಟಾ ಸಮೂಹ ಅಧ್ಯಕ್ಷ ರತನ್ ಟಾಟಾ ಶನಿವಾರದಂದು ಕೋವಿಡ್-19 ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡರು.

ಈ ಸಂದರ್ಭದಲ್ಲಿ ಆದಷ್ಟು ಬೇಗನೇ ಎಲ್ಲರೂ ಲಸಿಕೆ ಪಡೆದು ಸಾಂಕ್ರಾಮಿಕ ರೋಗದಿಂದ ರಕ್ಷಣೆ ಪಡೆಯಬೇಕೆಂದು ಮನವಿ ಮಾಡಿದರು.

ಕೋವಿಡ್ ಲಸಿಕೆ ಪ್ರಕ್ರಿಯೆಯನ್ನು ಶ್ಲಾಘಿಸಿರುವ ರತನ್ ಟಾಟಾ, 'ತ್ರಾಸವಿಲ್ಲದ ಮತ್ತು ನೋವುರಹಿತ' ಎಂದು ಬಣ್ಣಿಸಿದ್ದಾರೆ.

'ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದಕ್ಕಾಗಿ ಕೃತಜ್ಞನಾಗಿದ್ದೇನೆ. ಇದು ತ್ರಾಸವಿಲ್ಲದ ಮತ್ತು ನೋವುರಹಿತವಾಗಿದೆ. ಆದಷ್ಟು ಬೇಗನೇ ಎಲ್ಲರೂ ಲಸಿಕೆ ಪಡೆದು ರಕ್ಷಣೆ ಪಡೆಯಲಿದ್ದಾರೆ ಎಂದು ಭಾವಿಸುತ್ತೇನೆ' ಎಂದದ್ದಾರೆ.

ಈ ನಡುವೆ ಭಾರತದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ 78 ದಿನಗಳಲ್ಲಿ ದಿನವೊಂದರಲ್ಲೇ ಅತಿ ಹೆಚ್ಚು 23,285 ಪ್ರಕರಣಗಳು ದಾಖಲಾಗಿದ್ದವು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಏತನ್ಮಧ್ಯೆ ಕೋವಿಡ್ ಲಸಿಕೆ ವಿತರಣೆಯು 2.8 ಕೋಟಿ ದಾಟಿದ್ದು, ಶುಕ್ರವಾರದಂದು 18.40 ಲಕ್ಷ ವಿತರಿಸಲಾಗಿದೆ. ದೇಶಿಯವಾಗಿ ತಯಾರಿಸಿದ ಕೋವಿಡ್ ಲಸಿಕೆ ವಿತರಣೆ ಅಭಿಯಾನವನ್ನು ಜನವರಿ 16ರಂದು ಪ್ರಾರಂಭಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT