ಗುರುವಾರ , ಮೇ 26, 2022
25 °C

ಹಿರಿಯರಿಗೆ ಗೌರವ ಕೊಡಬೇಕು: ಅಣ್ಣನಿಗೆ ಬುದ್ಧಿ ಹೇಳಿದ ಆರ್‌ಜೆಡಿ ನಾಯಕ ತೇಜಸ್ವಿ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಪಟ್ನಾ: ತೇಜ್‌ ಪ್ರತಾಪ್‌ ಯಾದವ್‌ ಶಿಸ್ತಿನಿಂದ ವರ್ತಿಸಬೇಕು, ಹಿರಿಯರಿಗೆ ಗೌರವ ಕೊಡಬೇಕು ಎಂದು ರಾಷ್ಟ್ರೀಯ ಜನತಾದಳದ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಅಣ್ಣನಿಗೆ ಕಿವಿಮಾತು ಹೇಳಿದ್ದಾರೆ.

‘ನಮ್ಮದು ಶಿಸ್ತಿನ ಕುಟುಂಬ, ನಮ್ಮ ತಂದೆ ತಾಯಿ ಒಳ್ಳೆಯ ಸಂಸ್ಕೃತಿ ಮತ್ತು ಉತ್ತಮ ನಡವಳಿಕೆಯನ್ನು ಕಲಿಸಿಕೊಟ್ಟಿದ್ದಾರೆ, ತೇಜ್‌ ಪ್ರತಾಪ್‌ ಉತ್ತಮ ನಡವಳಿಕೆಯನ್ನು ರೂಢಿಸಿಕೊಳ್ಳಬೇಕು’ ಎಂದು ಹೇಳಿದ್ದಾರೆ.

ತೇಜ್‌ ಪ್ರತಾಪ್‌ ವರ್ತನೆ ಬಗ್ಗೆ ತಂದೆ ಲಾಲು ಪ್ರಸಾದ್‌ ಯಾದವ್‌ ಹಾಗೂ ತಾಯಿ ರಾಬ್ಡಿ ದೇವಿ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತೇಜಸ್ವಿ ಯಾದವ್‌ ಹೇಳಿದ್ದಾರೆ.

ಇತ್ತೀಚೆಗೆ ತೇಜ್ ಪ್ರತಾಪ್‌ ರಾಷ್ಟ್ರೀಯ ಜನತಾ ದಳದ ಹಿರಿಯ ನಾಯಕ ಜಗದಾನಂದ ಸಿಂಗ್‌ ಅವರ ಜತೆ ಅನುಚಿತವಾಗಿ ವರ್ತಿಸಿದ್ದರು. ಅಣ್ಣನ ನಡೆಯ ಬಗ್ಗೆ ತೇಜಸ್ವಿ ಯಾದವ್‌ ಕೂಡ ಬೇಸರ ವ್ಯಕ್ತಪಡಿಸಿದ್ದರು.

ಓದಿ: 

ಶನಿವಾರ ಪಟ್ನಾದಲ್ಲಿ ತೇಜ್‌ ಪ್ರತಾಪ್‌ ತಮ್ಮನನ್ನು ಭೇಟಿ ಮಾಡಲು ಅವರ ನಿವಾಸಕ್ಕೆ ತೆರಳಿದ್ದರು. ಆದರೆ ತೇಜಸ್ವಿ ಯಾದವ್ ಭೇಟಿಗೆ ನಿರಾಕರಿಸಿದರು ಎಂದು ಆರ್‌ಜೆಡಿ ಮೂಲಗಳು ತಿಳಿಸಿವೆ.

ಆರ್‌ಜೆಡಿಯ ಯುವ ಘಟಕದ ಅಧ್ಯಕ್ಷರ ನೇಮಕಾತಿ ಸಂಬಂಧ ಸಹೋದರರಲ್ಲಿ ಒಡಕು ಮೂಡಿದೆ.

ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು