ಭಾನುವಾರ, ಜುಲೈ 3, 2022
27 °C

ತಮಿಳುನಾಡು: ಕರ್ನಾಟಕಕ್ಕೆ 1.5 ಟನ್‌ಗಳಷ್ಟು ಅಕ್ಕಿ ಕಳ್ಳಸಾಗಣೆ, ಚಾಲಕನ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಈರೋಡ್‌ (ತಮಿಳುನಾಡು): ಕರ್ನಾಟಕಕ್ಕೆ ವ್ಯಾನ್‌ವೊಂದರ ಮೂಲಕ ಕಳ್ಳಸಾಗಣೆ ಮಾಡಲಾಗುತ್ತಿದ್ದ 1.5 ಟನ್‌ಗಳಷ್ಟು ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಆಹಾರ ವಿಭಾಗದ ಅಧಿಕಾರಿಗಳು ಭಾನುವಾರ ತಿಳಿಸಿದರು. 

‘ತಮಿಳುನಾಡು–ಕರ್ನಾಟಕ ಗಡಿಭಾಗದಲ್ಲಿರುವ ಬಾರ್ಗೂರ್‌ ಚೆಕ್‌ಪೋಸ್ಟ್‌ನಲ್ಲಿ ಪರಿಶೀಲನೆ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ.  ವ್ಯಾನ್‌ ಚಾಲಕನನ್ನು ಬಂಧಿಸಲಾಗಿದ್ದು, ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇದು ಇಲ್ಲಿನ ಪಡಿತರ ಅಂಗಡಿಗೆ ಸೇರಿದ ಅಕ್ಕಿಯಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು