ಮುಂಬೈ: ಲಖಿಂಪುರ–ಖೇರಿ ಹಿಂಸಾಚಾರ ಖಂಡಿಸಿ ಆಡಳಿತಾರೂಢ ಮಹಾವಿಕಾಸ ಅಘಾಡಿಯು ಸೋಮವಾರ ಮಹಾರಾಷ್ಟ್ರ ಬಂದ್‌ಗೆ ಕರೆ ಕೊಟ್ಟಿತ್ತು. ಪರಿಣಾಮವಾಗಿ, ಮುಂಬೈ ಮತ್ತು ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಸಂಚಾರ ವ್ಯತ್ಯಯವಾಗಿತ್ತು. ಮುಂಬೈನ ಬಹುತೇಕ ಅಂಗಡಿಗಳು ಮುಚ್ಚಿದ್ದವು. ಕೆಲವೆಡೆ ಕಲ್ಲೆಸೆತದ ಘಟನೆಗಳ ಬಳಿಕ ರಾಜ್ಯ ರಸ್ತೆ ಸಾರಿಗೆ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿದ್ದವು. ಬಂದ್ ಶೇ ನೂರರಷ್ಟು ಯಶಸ್ವಿಯಾಗಿದೆ ಎಂದು ಶಿವಸೇನಾ ಸಂಸದ ಸಂಜಯ ರಾವುತ್ ಹೇಳಿದ್ದಾರೆ.

ಇದು ರಾಜ್ಯ ಸರ್ಕಾರ ಪ್ರಾಯೋಜಕತ್ವದ ಬಂದ್. ಈ ಬಂದ್ ಅನಗತ್ಯವಾಗಿತ್ತು ಎಂದು ಬಿಜೆಪಿ ಮುಖಂಡರು ಟೀಕಿಸಿದ್ದಾರೆ. ಶಿವಸೇನಾ ಮತ್ತು ಎನ್‌ಸಿಪಿ ಜತೆಯಾಗಿ ಠಾಣೆಯಲ್ಲಿ ಭಾರಿ ರ‍್ಯಾಲಿಯನ್ನು ಆಯೋಜಿಸಿತ್ತು. ಬಂದ್ ನಡುವೆಯೂ ಆಟೋರಿಕ್ಷಾ ಚಾಲನೆ ಮಾಡಿದ ಕೆಲವು ಚಾಲಕರನ್ನು ಈ ಪಕ್ಷಗಳ ಕಾರ್ಯಕರ್ತರು ಥಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.