ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ ಲಸಿಕೆ ಭಾರತದಲ್ಲಿ ತಯಾರಿಕೆ?

Last Updated 8 ಸೆಪ್ಟೆಂಬರ್ 2020, 17:52 IST
ಅಕ್ಷರ ಗಾತ್ರ

ನವದೆಹಲಿ: ರಷ್ಯಾ ಅಭಿವೃದ್ಧಿಪಡಿಸಿರುವ ಕೋವಿಡ್‌ ಸಂಭಾವ್ಯ ಲಸಿಕೆ ಸ್ಪುಟ್ನಿಕ್‌–ವಿಯ ಮೂರನೇ ಹಂತದ ಪ್ರಯೋಗ ಮತ್ತು ಲಸಿಕೆ ತಯಾರಿಕೆಗೆ ಭಾರತದ ಜತೆ ಮಾತುಕುತೆ ನಡೆಯುತ್ತಿದೆ. ಕೋವಿಡ್‌ ವಿರುದ್ಧ ಈ ಹಂತಕ್ಕೆ ಬಂದಿರುವ ಮೊದಲನೇ ಸಂಭಾವ್ಯ ಲಸಿಕೆ ಇದು ಎಂದು ರಷ್ಯಾ ಹೇಳುತ್ತಿದೆ.

ಲಸಿಕೆಯನ್ನು ತಯಾರಿಸಲು ಭಾರತದ ಕಂಪನಿಗಳನ್ನು ಬಳಸಿಕೊಳ್ಳಲು ರಷ್ಯಾ ಉತ್ಸುಕವಾಗಿದೆ.

‘ಭಾರತದ ಹಲವು ಕಂಪನಿಗಳ ಜತೆಗೆ ಮಾತುಕತೆ ನಡೆದಿದೆ. ಎರಡು–ಮೂರು ಕಂಪನಿಗಳು ತಯಾರಿಕೆಗೆ ಮುಂದೆ ಬಂದಿವೆ. ರಷ್ಯಾ ಸರ್ಕಾರ ಮತ್ತು ಲಸಿಕೆ ಅಭಿವೃದ್ಧಿ ತಂಡದ ಜತೆಗೆ ಸಂಪರ್ಕದಲ್ಲಿವೆ’ ಎಂದು ನೀತಿ ಆಯೋಗದ ಸದಸ್ಯ ವಿ.ಕೆ. ಪಾಲ್‌ ಹೇಳಿದ್ದಾರೆ. ಭಾರತದಲ್ಲಿ ಲಸಿಕೆ ತಯಾರಿಕೆಯ ಚರ್ಚೆಯು ಎರಡೂ ದೇಶಗಳಿಗೂ ಅನುಕೂಲಕರ ರೀತಿಯಲ್ಲಿ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಈ ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸುವುದು ಭಾರತಕ್ಕೆ ಸಾಧ್ಯವಿದೆ. ಇದು ಭಾರತ ಮತ್ತು ರಷ್ಯಾಕ್ಕೆ ಒಳ್ಳೆಯದು. ತಯಾರಿಸಲಾದ ಲಸಿಕೆಯಲ್ಲಿ ಒಂದಷ್ಟು ಭಾಗವನ್ನು ಜಗತ್ತಿನ ಇತರ ದೇಶಗಳಿಗೂ ಪೂರೈಸಬಹುದು ಎಂದು ಅವರು ಹೇಳಿದ್ದಾರೆ.

ಲಸಿಕೆಗೆ ಸಂಬಂಧಿಸಿದ ದತ್ತಾಂಶಗಳನ್ನು ಭಾರತದ ವಿಜ್ಞಾನಿಗಳು ಪರಿಶೀಲಿಸಿದ್ದಾರೆ. ಅಗತ್ಯ ಬಿದ್ದರೆ ಮೂರನೇ ಹಂತದ ಪ್ರಯೋಗಗಳನ್ನೂ ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಲಸಿಕೆ ಅಭಿವೃದ್ಧಿಗೆ ರಷ್ಯಾವು ತುರ್ತು ಅನುಮೋದನೆಗಳನ್ನು ನೀಡಿದೆ. ಲಸಿಕೆ ಅಭಿವೃದ್ಧಿ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಿದೆ ಎಂದು ಬೇರೆ ದೇಶಗಳು ಟೀಕಿಸಿದ್ದವು. ಆದರೆ, ದಿ ಲ್ಯಾನ್ಸೆಟ್‌ ನಿಯತಕಾಲಿಕದಲ್ಲಿ ಲಸಿಕೆಯ ಪೂರ್ವಭಾವಿ ಪ್ರಯೋಗದ ಫಲಿತಾಂಶದ ಬಗ್ಗೆ ಪ್ರಬಂಧ ಪ್ರಕಟವಾಗಿದೆ. ಲಸಿಕೆ ಪಡೆದುಕೊಂಡವರಲ್ಲಿ 42 ದಿನಗಳಲ್ಲಿ ಯಾವುದೇ ಸಮಸ್ಯೆಗಳು ಕಾಣಿಸಿಕೊಂಡಿಲ್ಲ. ಲಸಿಕೆ ಪಡೆದು 21 ದಿನಗಳಲ್ಲಿ ಪ್ರತಿರೋಧ ಶಕ್ತಿಯೂ ರೂಪುಗೊಂಡಿದೆ ಎಂದು ಈ ಪ್ರಬಂಧದಲ್ಲಿ ಹೇಳಲಾಗಿದೆ. ಹಾಗಾಗಿ, ಈ ಲಸಿಕೆಯು ಭರವಸೆ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT