ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ

ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಸಾಧಕರಿಗೆ ಪ್ರಶಸ್ತಿ
Last Updated 23 ಫೆಬ್ರುವರಿ 2023, 22:15 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಸಾಧಕರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಗುರುವಾರ ಪ್ರದಾನ ಮಾಡಿದರು.

2019ನೇ ಸಾಲಿನ ಪ್ರಶಸ್ತಿ ಯನ್ನು ವಿನಾಯಕ ತೊರವಿ (ಹಿಂದೂಸ್ಥಾನಿ ಸಂಗೀತ), ವಸುಂಧರಾ ದೊರೆಸ್ವಾಮಿ (ಭರತನಾಟ್ಯ), ಮಂಜು ಭಾರ್ಗವಿ (ಕೂಚಿಪುಡಿ) ಸ್ವೀಕರಿಸಿದರು. 2020ನೇ ಸಾಲಿನ ಪ್ರಶಸ್ತಿಯನ್ನು ಆರ್‌.ಕೆ.ಪದ್ಮನಾಭ (ಕರ್ನಾಟಕ ಸಂಗೀತ), ಎಸ್‌.ಜಿ.ಲಕ್ಷ್ಮಿದೇವಮ್ಮ (ಜನಪದ), ಆರತಿ ಅಂಕಲಿಕರ್‌ (ಹಿಂದೂಸ್ಥಾನಿ ಸಂಗೀತ), 2021ನೇ ಸಾಲಿನ ಪ್ರಶಸ್ತಿಯನ್ನು ರವೀಂದ್ರ ಯಾವಗಲ್‌ (ತಬಲಾ), ಎಚ್.ಆರ್.ಲೀಲಾವತಿ (ಸುಗಮ ಸಂಗೀತ), ಗರ್ತಿಕೆರೆ ರಾಘಣ್ಣ (ಜನಪದ) ಹಾಗೂ ಡಿ.ಬಾಲಕೃಷ್ಣ (ವೀಣೆ) ಅವರಿಗೆ ಪ್ರದಾನ ಮಾಡಲಾಯಿತು.

ರಂಗಭೂಮಿ- ವಸ್ತ್ರ ವಿನ್ಯಾಸ ವಿಭಾಗದಲ್ಲಿ 2020ರ ಪ್ರಶಸ್ತಿಯನ್ನು ಪುರುಷೋತ್ತಮ ತಲವಾಟ ಸ್ವೀಕರಿಸಿದರು. 500ಕ್ಕೂ ಹೆಚ್ಚು ನಾಟಕಗಳಿಗೆ ನೇಪಥ್ಯ ಕಲಾವಿದರಾಗಿ, ಅನೇಕ ನಾಟಕಗಳ ನಿರ್ದೇಶಕರಾಗಿ, ವಿನ್ಯಾಸಕಾರರಾಗಿ, ನಟರಾಗಿ ಅವರು ಸೇವೆ ಸಲ್ಲಿಸಿದ್ದಾರೆ. ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ತಲಾ ₹1 ಲಕ್ಷ ನಗದು ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT