ಶುಕ್ರವಾರ, ಸೆಪ್ಟೆಂಬರ್ 25, 2020
24 °C

ಸುಶಾಂತ್‌ ಸಿಂಗ್‌ ಪ್ರಕರಣ: ಶಿವಸೇನೆ ನಾಯಕ ಸಂಜಯ್‌ ರಾವುತ್‌ಗೆ ಲೀಗಲ್ ನೊಟೀಸ್‌

ಪಿಟಿಐ Updated:

ಅಕ್ಷರ ಗಾತ್ರ : | |

Sanjay Raut

ಪಾಟ್ನಾ: ಶಿವಸೇನೆ ನಾಯಕರಾದ ರಾಜ್ಯಸಭಾ ಸದಸ್ಯ ಸಂಜಯ್‌ ರಾವುತ್‌ ಅವರಿಗೆ ಬಾಲಿವುಡ್‌ ನಟ ದಿ. ಸುಶಾಂತ್‌ ಸಿಂಗ್‌ ಅವರ ಸಂಬಂಧಿಯಾದ ಬಿಹಾರದ ಶಾಸಕ ನೀರಜ್‌ ಕುಮಾರ್‌ ಬಬ್ಲು ಲೀಗಲ್‌ ನೊಟೀಸ್‌ ನೀಡಿದ್ದಾರೆ. 

‘ಸುಶಾಂತ್‌ ಸಿಂಗ್‌ ರಜಪೂತ್‌ ಅವರು ತನ್ನದೇ ಕುಟುಂಬದೊಂದಿಗೆ ಉತ್ತಮ ಸಂಬಂಧ ಹೊಂದಿರಲಿಲ್ಲ’ ಎಂದು ಸಂಜಯ್‌ ರಾವುತ್ ಅವರು‌ ‘ಸಾಮ್ನಾ’ ಪತ್ರಿಕೆಯ ತನ್ನ ಅಂಕಣದಲ್ಲಿ ಬರೆದಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ನೀರಜ್‌ ಕುಮಾರ್‌ ಅವರು, ರಾವುತ್‌ ಕ್ಷಮೆ ಕೇಳಬೇಕು ಎಂದು ನೊಟೀಸ್‌ ಕಳುಹಿಸಿದ್ದಾರೆ. 

‘ಸಂಜಯ್‌ ರಾವುತ್ ಅವರು‌ ಆಧಾರ ರಹಿತ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಅವರು 48 ಗಂಟೆಗಳೊಳಗೆ ಕ್ಷಮೆ ಕೇಳಬೇಕು. ಇಲ್ಲದಿದ್ದರೆ, ಕಾನೂನಿನ ಮೊರೆ ಹೋಗುತ್ತೇವೆ’ ಎಂದು ನೀರಜ್‌ ಕುಮಾರ್‌ ಪರ ವಕೀಲ ಅನೀಶ್‌ ಜಾ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು