ಶನಿವಾರ, ನವೆಂಬರ್ 28, 2020
18 °C

ತಬ್ಲೀಗ್ ಜಮಾತ್ ಸದಸ್ಯರ ವಿರುದ್ಧದ ಪ್ರಕರಣ: ತ್ವರಿತ ವಿಚಾರಣೆಗೆ ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ವೀಸಾ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದ ತಬ್ಲೀಗ್ ಜಮಾತ್‌ನ ವಿದೇಶಿ ಸದಸ್ಯರ ವಿರುದ್ಧದ  ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಬೇಕು’ ಎಂದು ಸುಪ್ರೀಂಕೋರ್ಟ್ ಕೆಳಹಂತದ ನ್ಯಾಯಾಲಯಗಳಿಗೆ ಸೂಚಿಸಿದೆ.

ನ್ಯಾಯಮೂರ್ತಿಗಳಾದ ಎ.ಎಂ.ಖನ್‌ವಿಲ್ಕರ್, ದಿನೇಶ್ ಮಹೇಶ್ವರಿ ಮತ್ತು ಸಂಜೀವ್ ಖನ್ನಾ ಅವರಿದ್ದ ನ್ಯಾಯಪೀಠವು ಈ ಸಂಬಂಧ ನಿರ್ದೇಶನವನ್ನು ನೀಡಿತು.

ದೆಹಲಿಯಲ್ಲಿ ತಬ್ಲೀಗ್ ಜಮಾತ್ ಸಮಾವೇಶದಲ್ಲಿ ಭಾಗವಹಿಸಿದ್ದ ಸದಸ್ಯರನ್ನು ಕಪ್ಪುಪಟ್ಟಿಗೆ ಸೇರಿಸಿದ್ದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನವೆಂಬರ್ 20ಕ್ಕೆ ನಿಗದಿಪಡಿಸಿತು.

ಹಿರಿಯ ವಕೀಲ ಮನೇಕಾ ಗುರುಸ್ವಾಮಿ ಅವರು ತಬ್ಲೀಗ್ ಜಮಾತ್ ಸದಸ್ಯರ ಪರವಾಗಿ ಹಾಜರಿದ್ದು, ಎಂಟು ಸದಸ್ಯರ ಬಿಡುಗಡೆ ಸಂಬಂಧಿತ ಅರ್ಜಿಗಳ ವಿಚಾರಣೆಯನ್ನು ಕೆಳಹಂತದ ಕೋರ್ಟ್‌ಗಳಲ್ಲಿ ನ.10ಕ್ಕೆ ನಿಗದಿಯಾಗಿದೆ ಎಂದು ತಿಳಿಸಿದರು.

‘ತಬ್ಲೀಗ್ ಜಮಾತ್‌ನ ವಿದೇಶಿ ಸದಸ್ಯರುಗಳ ವಿರುದ್ಧ 11 ವಿವಿಧ ರಾಜ್ಯಗಳಲ್ಲಿ ಒ್ಟಟಟು 205 ಎಫ್ಐಆರ್ ದಾಖಲಾಗಿವೆ. ಇದುವರೆಗೂ ಒಟ್ಟು 2,765 ಸದಸ್ಯರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ’ ಎಂದು ಕೇಂದ್ರ ತಮ್ಮ ಪ್ರಮಾಣಪತ್ರದಲ್ಲಿ ತಿಳಿಸಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು