ಬುಧವಾರ, ನವೆಂಬರ್ 30, 2022
17 °C

ಪೈಲಟ್‌ಗಳಿಗೂ ಪಿತೃತ್ವ ರಜೆ: ಸಚಿವ ಸಿಂಧಿಯಾ ಒಲವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮಹಿಳಾ ನೌಕರರಿಗೆ ನೀಡಲಾಗುವ ಮಾತೃತ್ವ ಅಥವಾ ಹೆರಿಗೆ ರಜೆ ರೀತಿ ಪುರುಷ ನೌಕರರಿಗೂ ಪಿತೃತ್ವ ರಜೆ ನೀಡುವ ಬಗ್ಗೆ ವಿಮಾನಯಾನ ಕಂಪನಿಗಳು ಪರಿಗಣಿಸಬೇಕು ಎಂದು ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಪ್ರತಿಪಾದಿಸಿದ್ದಾರೆ.

ಇಂತಹ ನಿರ್ಧಾರದಿಂದ ಮಕ್ಕಳನ್ನು ಪೋಷಿಸುವ ಜವಾಬ್ದಾರಿಯನ್ನು ತಂದೆ-ತಾಯಿ ಇಬ್ಬರೂ ಹಂಚಿಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ಅಲ್ಲದೆ ಮಹಿಳಾ ಪೈಲಟ್‌ಗಳ ಪ್ರಮಾಣವನ್ನು ಈಗಿನ ಶೇ 15ರಿಂದ ಶೇ 50ಕ್ಕೆ ಹೆಚ್ಚಿಸುವ ಪರವಾಗಿಯೂ ಅವರು ಧ್ವನಿಯೆತ್ತಿದ್ದಾರೆ. 

ಸರ್ಕಾರೇತರ ಸಂಸ್ಥೆಯೊಂದು ಬುಧವಾರ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಂಧಿಯಾ ಅವರು, 'ಶಿಶುಕೇಂದ್ರ, ಮಾತೃತ್ವ ರಜೆ ಸೇರಿದಂತೆ ಇನ್ನಿತರ ಕ್ರಮಗಳ ಮೂಲಕ ನಮ್ಮ ವಿಮಾನಯಾನ ಸಂಸ್ಥೆಗಳು ಮಹಿಳೆಯರಿಗೆ ಆರೋಗ್ಯಪೂರ್ಣವಾದ ವಾತಾವರಣವನ್ನು ಕಲ್ಪಿಸಿವೆ. ಇದೀಗ ನಾವು ಇದಕ್ಕಿಂತಲೂ ಮತ್ತಷ್ಟು ಮುಂದೆ ಹೋಗಬೇಕಿದೆ. ಮಕ್ಕಳ ಜವಾಬ್ದಾರಿ ಮಹಿಳೆಯರಿಗೆ ಮಾತ್ರ ಏಕೆ? ಪುರುಷರಿಗೂ ಈ ಜವಾಬ್ದಾರಿ ನೀಡಲು ಅವರಿಗೂ ಪಿತೃತ್ವ ರಜೆ ನೀಡುವ ಬಗ್ಗೆ ಪರಿಗಣಿಸಬೇಕಿದೆ' ಎಂದು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು