ಮಂಗಳವಾರ, ಜೂನ್ 15, 2021
25 °C

ಮಹಾರಾಷ್ಟ್ರ: ಸ್ಯಾನಿಟೈಜರ್‌ ಕುಡಿದು ಏಳು ಜನರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಕೋವಿಡ್‌–19 ಹಿನ್ನೆಲೆಯಲ್ಲಿ ಹೇರಿದ ಲಾಕ್‌ಡೌನ್‌ನಿಂದಾಗಿ ಮದ್ಯ ಸಿಗದ ಕಾರಣ ಅಲ್ಕೋಹಾಲ್‌ ಆಧಾರಿತ ಸ್ಯಾನಿಟೈಜರ್‌ ಕುಡಿದ ಪರಿಣಾಮ ಏಳು ಜನರು ಮೃತಪಟ್ಟ ಆಘಾತಕಾರಿ ಘಟನೆ ಯವತ್‌ಮಲ್‌ ಜಿಲ್ಲೆಯಲ್ಲಿ ಸಂಭವಿಸಿದೆ.

ಜಿಲ್ಲೆಯ ವಣಿ ಎಂಬಲ್ಲಿ ಈ ಘಟನೆ ನಡೆದಿದೆ. ಮೃತರು ಕೂಲಿ ಕೆಲಸ, ರಿಕ್ಷಾ ಓಡಿಸುವ ಕಾಯಕ ಮಾಡಿಕೊಂಡಿದ್ದರು.

‘ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮದ್ಯದಂಗಡಿಗಳು ಮುಚ್ಚಿವೆ. ಇದರಿಂದ ಕಂಗೆಟ್ಟ ಇವರು ಹ್ಯಾಂಡ್‌ ಸ್ಯಾನಿಟೈಜರ್‌ಅನ್ನೇ ಕುಡಿದು ಜೀವ ಕಳೆದುಕೊಂಡಿದ್ದಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿಲೀಪ್‌ ಭುಜಬಲ್‌ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು