ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಒಡಕುಂಟು ಮಾಡುವ ಪಕ್ಷವೆಂದು 25 ವರ್ಷದ ಹಿಂದೆಯೇ ಪವಾರ್ ಹೇಳಿದ್ದರು: ರಾವತ್

Last Updated 11 ಡಿಸೆಂಬರ್ 2021, 13:05 IST
ಅಕ್ಷರ ಗಾತ್ರ

ಮುಬೈ: 'ಬಿಜೆಪಿಯು ಒಡಕುಂಟು ಮಾಡುವ ಪಕ್ಷವೆಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು 25 ವರ್ಷಗಳ ಹಿಂದೆಯೇ ಹೇಳಿದ್ದರು ಆದರೆ ಶಿವಸೇನೆಗೆ ಎರಡು ವರ್ಷಗಳ ಹಿಂದಷ್ಟೇ ವಾಸ್ತವ ಅರ್ಥವಾಗಿದೆ' ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಶನಿವಾರ ತಿಳಿಸಿದ್ದಾರೆ.

2019ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಬಳಿಕ ಉದ್ಧವ್ ಠಾಕ್ರೆ ನೇತೃತ್ವದ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಕೊನೆಗೊಳಿಸಿ ಎನ್‌ಸಿಪಿ ಮತ್ತು ಕಾಂಗ್ರೆಸ್‌ನೊಂದಿಗೆ ಸರ್ಕಾರ ರಚಿಸಿರುವುದನ್ನು ಉಲ್ಲೇಖಿಸಿ ಅವರು ಹೇಳಿದರು.

ವಿವಿಧ ರಾಜಕೀಯ ರ‍್ಯಾಲಿಗಳಲ್ಲಿನ ಶರದ್ ಪವಾರ್ ಅವರ ಭಾಷಣಗಳ ಸಂಗ್ರಹವಾಗಿರುವ 'ನೇಮ್‌ಕಚಿ ಬೋಲ್ಣೇ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಸುಮಾರು 25 ವರ್ಷದ ಹಿಂದೆ ಶರದ್ ಪವಾರ್ ಅವರು ಬಿಜೆಪಿಗೆ ಈ ದೇಶದ ಏಕತೆ ಬೇಕಿಲ್ಲ. ಅದರ ವಿಧಾನ ಒಡಕುಂಟು ಮಾಡುವುದಾಗಿದೆ ಎಂದಿದ್ದರು. ಅಲ್ಲದೆ, ಬಿಜೆಪಿಯ ನೀತಿಯು ಪ್ರಗತಿಗೆ ವಿರೋಧವಾಗಿದ್ದು, ಅದು ದೇಶವನ್ನು ಹಿಂದಕ್ಕೆ ಕೊಂಡೊಯ್ಯುತ್ತದೆ ಎಂದಿದ್ದರು. ಇದನ್ನು ಅರ್ಥ ಮಾಡಿಕೊಳ್ಳಲು ನಮಗೆ ಜಾಸ್ತಿ ಸಮಯ ಬೇಕಾಯಿತು' ಎಂದರು.

'ಪುಸ್ತಕದ ಹೆಸರು ತುಂಬಾ ಸುಂದರವಾಗಿದ್ದು, ನಾವೆಲ್ಲರೂ ಇದನ್ನು ನರೇಂದ್ರ ಮೋದಿಯವರಿಗೆ ಉಡುಗೊರೆಯಾಗಿ ನೀಡಬೇಕು. ಅವರು ಕೆಲವು ವಿಷಯಗಳನ್ನು ತಿಳಿದುಕೊಳ್ಳಬೇಕಿದೆ' ಎಂದು ತಿಳಿಸಿದರು.

ಪ್ರಶ್ನೆಗಳನ್ನು ಕೇಳಲು ಪ್ರಯತ್ನಿಸುವವರನ್ನು ವಿರೋಧಿಸುವ ಮತ್ತು ಬಾಯಿಮುಚ್ಚಿಸುವ ಕೆಲಸವಾಗುತ್ತಿರುವುದನ್ನು ಕಳೆದ ಕೆಲವು ವರ್ಷಗಳಿಂದ ನಾವು ನೋಡುತ್ತಿದ್ದೇವೆ. ಪ್ರಶ್ನೆಗಳನ್ನು ಎತ್ತುವ ಮೂಲಭೂತ ಹಕ್ಕುಗಳ ನಿರಾಕರಣೆಯು ಬಹುಸಂಖ್ಯಾತವಾದಕ್ಕೆ ದಾರಿ ಮಾಡಿಕೊಡುತ್ತದೆ. ಕೆಲವು ವರ್ಷಗಳ ಹಿಂದೆಯೇ ಪವಾರ್ ಇದನ್ನು ಹೇಳಿದ್ದರು ಮತ್ತು ಈಗ ನಾವು ಅದನ್ನು ನೋಡುತ್ತಿದ್ದೇವೆ' ಎಂದು ರಾವತ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT