ಮಂಗಳವಾರ, ಮೇ 24, 2022
26 °C

ಸಮಾಜ ಸೇವೆ ನಮ್ಮ ಕುಟುಂಬದ ರಕ್ತದಲ್ಲಿದೆ: ನಟ ಸೋನು ಸೂದ್‌

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಮೊಗಾ (ಪಂಜಾಬ್‌): ಸಮಾಜ ಸೇವೆ ಎಂಬುದು ನಮ್ಮ ರಕ್ತದಲ್ಲಿದೆ ಎಂದು ಬಾಲಿವುಡ್‌ ನಟ ಸೋನು ಸೂದ್‌ ಸೋಮವಾರ ಹೇಳಿದ್ದಾರೆ.

ಸೋನು ಸೂದ್‌ ಅವರ ಸಹೋದರಿ ಮಾಳವಿಕಾ ಸೂದ್ ಪಂಜಾಬ್‌ನ ಮೊಗಾ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಯೋಜನೆಗೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡುವಾಗ ಅವರು ಸಮಾಜ ಸೇವೆಯ ಬಗ್ಗೆ ಮಾತನಾಡಿದ್ದಾರೆ.

‘ಪ್ರಾಧ್ಯಾಪಕಿಯಾಗಿದ್ದ ನನ್ನ ತಾಯಿ ತಮ್ಮ ಜೀವನದುದ್ದಕ್ಕೂ ಮಕ್ಕಳಿಗೆ ವಿದ್ಯೆ ಕಲಿಸಿದವರು. ನನ್ನ ತಂದೆ ಸಮಾಜ ಸೇವಕರಾಗಿದ್ದರು. ಇಲ್ಲಿನ ಶಾಲೆಗಳು, ಕಾಲೇಜುಗಳು ಮತ್ತು ಧರ್ಮಶಾಲೆಗಳನ್ನು ನಮ್ಮ ಸ್ವಂತ ಜಮೀನಿನಲ್ಲಿ ನಿರ್ಮಿಸಲಾಗಿದೆ. ಸಮಾಜಸೇವೆ ಎಂಬುದು ನಮ್ಮ ರಕ್ತದಲ್ಲಿದೆ‘ ಎಂದು ಸೋನು ಸೂದ್‌ ಹೇಳಿದರು.

‘ನನ್ನ ಸಹೋದರಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದಾಳೆ. ಲಸಿಕೆ ಆಂದೋಲನ ನಡೆಸಿದ್ದಾಳೆ. ಶಿಕ್ಷಣ ಕ್ಷೇತ್ರದಲ್ಲಿ ದುಡಿದಿದ್ದಾಳೆ. ಮೊಗ ಕ್ಷೇತ್ರದಲ್ಲಿ ಜನ ಸಾಮಾನ್ಯರಿಗೆ ದೊಡ್ಡ ಮಟ್ಟದಲ್ಲಿ ನೆರವಾಗಿದ್ದಾಳೆ. ಜನರು ಆಕೆಯನ್ನು ವ್ಯವಸ್ಥೆಯ ಭಾಗವಾಗಬೇಕೆಂದು ಬಯಸಿದ್ದಾರೆ’ ಎಂದು ಸೂದ್‌ ಹೇಳಿದರು. ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ನಟ ಸೋನು ಸೂದ್‌ ಅವರು ಕೋವಿಡ್‌ ಸಾಂಕ್ರಾಮಿಕ ಮತ್ತು ಲಾಕ್‌ಡೌನ್‌ ಅವಧಿಯಲ್ಲಿ ಸಾರ್ವಜನಿಕರಿಗೆ ನೆರವಿನ ಹಸ್ತ ಚಾಚುವ ಮೂಲಕ ಸುದ್ದಿಯಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು