ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಶಾಂತ್ ಜೀವ ವಿಮೆ ಹೊಂದಿಲ್ಲ; ಮಾಧ್ಯಮಗಳು ಸುಳ್ಳು ಸುದ್ದಿ ಹರಡುತ್ತಿವೆ: ವಿಕಾಸ್

Last Updated 3 ಸೆಪ್ಟೆಂಬರ್ 2020, 4:38 IST
ಅಕ್ಷರ ಗಾತ್ರ

ನವದೆಹಲಿ: ಇತ್ತೀಚೆಗೆ ಮೃತಪಟ್ಟ ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರು ಜೀವ ವಿಮೆ ಹೊಂದಿದ್ದಾರೆ. ಆದರೆ, ಅವರೇನಾದರೂ ಆತ್ಮಹತ್ನೆ ಮಾಡಿಕೊಂಡಿದ್ದರೆ ವಿಮೆ ಹಣವು ಅವರ ಕುಟುಂಬದವರಿಗೆ ಸಿಗುವುದಿಲ್ಲ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸುಶಾಂತ್‌ ಅವರ ತಂದೆ ಕೆಕೆ ಸಿಂಗ್ ಪರ ವಕೀಲ ವಿಕಾಸ್‌ ಸಿಂಗ್‌‌, ನಟ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಪುಕಾರು ಮತ್ತು ಅವರು ಜೀವ ವಿಮೆಯನ್ನೇ ಮಾಡಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ವಿಕಾಸ್‌, ‘ಸುಶಾಂತ್‌ ಅವರು ಜೀವ ವಿಮಾ ಪಾಲಿಸಿಗಳನ್ನು ಮಾಡಿಸಿದ್ದರು. ಒಂದುವೇಳೆ ಅವರೇನಾದರೂ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಕುಟುಂಬದವರಿಗೆ ವಿಮೆಯ ಹಣ ಸಿಗುವುದಿಲ್ಲ. ಈ ಕಾರಣಕ್ಕಾಗಿಯೇ ಆತ್ಮಹತ್ಯೆ ಪ್ರಕರಣವನ್ನು ಆತ್ಮಹತ್ಯೆಗೆ ಪ್ರೇರಣೆ ನೀಡಲಾಗಿದೆ ಅಥವಾ ಕೊಲೆ ಎಂದು ಬಿಂಬಿಸಲಾಗುತ್ತಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಇದು ಮಾಧ್ಯಮಗಳು ಹರಡುತ್ತಿರುವ ಸುಳ್ಳು. ಸುಶಾಂತ್‌ ಯಾವುದೇ ಜೀವ ವಿಮೆಯನ್ನು ಹೊಂದಿಲ್ಲ’ ಎಂದು ತಿಳಿಸಿದ್ದಾರೆ.

‘ಈ ಸುಳ್ಳು ಆರೋಪವು ತೀವ್ರ ಮಾನಹಾನಿಕರವಾಗಿದೆ. ವಾಹಿನಿಗಳು ಇದೇರೀತಿ ಮುಂದುವರಿದರೆ, ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟವರನ್ನು ಒತ್ತಾಯಿಸಲಾಗುವುದು’ ಎಂದೂ ಹೇಳಿದ್ದಾರೆ.

ಜೊತೆಗೆ ಅನುಮತಿ ಪಡೆಯದೆ ನಟನಿಗೆ ಸಂಬಂಧಿಸಿದಂತೆ ಯಾವುದೇ ಪುಸ್ತಕ, ಸಿನಿಮಾ ಅಥವಾ‌ಧಾರಾವಾಹಿ ನಿರ್ಮಿಸುವಂತಿಲ್ಲ ಎಂಬ ನಿರ್ಧಾರವನ್ನುಸುಶಾಂತ್ ತಂದೆ ತೆಗೆದುಕೊಂಡಿದ್ದಾರೆ. ಇದನ್ನು ಮೀರಿ ಯಾರಾದರೂ ಮುಂದುವರಿದರೆ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

‘ರಿಯಾ ಚಕ್ರವರ್ತಿಯವರು ತಮ್ಮ ಜೀವನದಲ್ಲಿ ಬಂದ ಬಳಿಕ, ಸುಶಾಂತ್‌ ಅವರಲ್ಲಿ ಮಾನಸಿಕ ಸಮಸ್ಯೆಗಳು ಕಾಣಿಸಿಕೊಂಡಿದ್ದವು ಹಾಗೂ ಆತಂಕದ ಭಾವ ಆವರಿಸಿತ್ತು. ಹಾಗಾಗಿ ರಿಯಾ ಅವರು ಸುಶಾಂತ್‌ರ ಸಂಪೂರ್ಣ ಸಮಸ್ಯೆಗಳಿಗೆ ಕಾರಣರಾಗಿದ್ದಾರೆ ಎಂದು ಸದ್ಯ ದಾಖಲಾಗಿರುವ ಎಫ್‌ಐಆರ್ ಸ್ಪಷ್ಟವಾಗಿ ಹೇಳುತ್ತದೆ’ ಎಂದು ತಿಳಿಸಿದ್ದಾರೆ.

ಒಂದು ವರ್ಷದಿಂದ ಡೇಟಿಂಗ್ ನಡೆಸುತ್ತಿದ್ದ ರಿಯಾ ಅವರು ಜೂನ್ 8ರಂದು ಸುಶಾಂತ್ ಮನೆಯಿಂದ ಹೊರನಡೆದಿದ್ದರು. ಅದಾದ ಎಂಟು ದಿನಗಳ ನಂತರ ಸುಶಾಂತ್ (ಜುಲೈ 14) ಮೃತಪಟ್ಟಿದ್ದರು. ಹಾಗಾಗಿ, ಕೆಕೆ ಸಿಂಗ್ ಅವರು‌, ರಿಯಾ ಹಾಗೂ ಆಕೆಯ ಕುಟುಂಬದವರು ತಮ್ಮ ಮಗನಿಗೆ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು.

ಸದ್ಯ ಸುಪ್ರೀಂ ಕೋರ್ಟ್‌ ಆದೇಶದಂತೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ರಿಯಾ ಹಾಗೂ ಸುಶಾಂತ್ ಜೊತೆ ವಾಸವಿದ್ದ ಸ್ನೇಹಿತ, ಮನೆಗೆಲಸದವರನ್ನು ವಿಚಾರಣೆಗೆ ಒಪಡಿಸಿದೆ. ಮಾದಕವಸ್ತು ನಿಯಂತ್ರಣ ದಳ ಮತ್ತು ಜಾರಿ ನಿರ್ದೇಶನಾಲಯವೂ ಪ್ರಕರಣದ ತನಿಖೆ ಕೈಗೆತ್ತಿಕೊಂಡಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT