ಸೋಮವಾರ, ಜುಲೈ 4, 2022
24 °C

ತೈವಾನ್‌ಗೆ ಸೇನಾ ಕಣ್ಗಾವಲು ವಿಮಾನ ರವಾನಿಸಿದ್ದ ಚೀನಾ

ಎಪಿ Updated:

ಅಕ್ಷರ ಗಾತ್ರ : | |

Prajavani

ತೈಪೆ: ಚೀನಾವು ಸತತ ಮೂರು ದಿನದಿಂದ ತನ್ನ ಎರಡು ಸೇನಾ ಕಣ್ಗಾವಲು ವಿಮಾನಗಳನ್ನು ದ್ವೀಪ ರಾಷ್ಟ್ರ ತೈವಾನ್‌ ಕಡೆಗೆ ಕಳುಹಿಸಿದ್ದು, ಇದಕ್ಕೆ ಪ್ರತಿಯಾಗಿ ಗಸ್ತು ವಿಮಾನಗಳನ್ನು ಕಳುಹಿಸಿರುವುದಾಗಿ ತೈವಾನ್‌ ಗುರುವಾರ ತಿಳಿಸಿದೆ.

ಕಳೆದ ಕೆಲ ತಿಂಗಳಿಂದ ಚೀನಾ ಹಾಗೂ ತೈವಾನ್‌ ನಡುವಿನ ಬಿಕ್ಕಟ್ಟು ಉಲ್ಬಣಿಸಿದ್ದು, ತೈವಾನ್‌ ತನ್ನ ಭಾಗವೆಂದು ಚೀನಾ ವಾದಿಸುತ್ತಿದೆ. ಅಗತ್ಯವಿದ್ದರೆ ಬಲಪ್ರಯೋಗದಿಂದ ತೈವಾನ್‌ ವಶಪಡಿಸಿಕೊಳ್ಳುತ್ತೇವೆ ಎಂದೂ ತಿಳಿಸಿದೆ. ಇಂಥ ಸ್ಥಿತಿಯ ನಡುವೆಯೇ ಕಳೆದ ವಾರ ಸೂಕ್ಷ್ಮಪ್ರದೇಶವಾಗಿರುವ ತೈವಾನ್ ಸ್ಟ್ರೈಟ್‌ಗೆ 37 ಯುದ್ಧ ವಿಮಾನಗಳನ್ನು ಚೀನಾ ರವಾನಿಸಿತ್ತು. ತೈವಾನ್‌ಗೆ ಅಮರಿಕದ ವಿದೇಶಾಂಗ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಯೊಬ್ಬರು ಭೇಟಿ ನೀಡಿದ ಸಂದರ್ಭದಲ್ಲೇ ಚೀನಾ ಈ ಹೆಜ್ಜೆ ಇರಿಸಿತ್ತು. 

‘ಕಳೆದ ಸೋಮವಾರ, ಮಂಗಳವಾರ ಹಾಗೂ ಬುಧವಾರ ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿಯು ತನ್ನ ಎರಡು ವಿಮಾನಗಳನ್ನು ಕಳುಹಿಸಿತ್ತು. ಇವುಗಳನ್ನು ಗುರುತಿಸಿದ ನಾವು, ಪ್ರತಿಯಾಗಿ ಗಸ್ತು ವಿಮಾನಗಳನ್ನು ನಿಯೋಜಿಸಿದ್ದೆವು’ ಎಂದು ತೈವಾನ್‌ ರಕ್ಷಣಾ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು