ಸೋಮವಾರ, ಜೂನ್ 14, 2021
25 °C

ವಿರೋಧ ಪಕ್ಷಗಳ ಮೈತ್ರಿಕೂಟದ ವಿಚಾರವಾಗಿ ಕೆಲ ದಿನಗಳಲ್ಲೇ ಮಾತುಕತೆ: ಸಂಜಯ್‌ ರಾವುತ್

ಪಿಟಿಐ‌ Updated:

ಅಕ್ಷರ ಗಾತ್ರ : | |

ಮುಂಬೈ: ‘ರಾಷ್ಟ್ರಮಟ್ಟದಲ್ಲಿ ವಿರೋಧಪಕ್ಷಗಳ ಮೈತ್ರಿಕೂಟವನ್ನು ರಚಿಸುವುದರ ಕುರಿತಂತೆ ಕೆಲವೇ ದಿನಗಳಲ್ಲಿ ಮಾತುಕತೆ ಆರಂಭವಾಗಲಿದೆ‘ ಎಂದು ಶಿವಸೇನೆ ನಾಯಕ ಸಂಜಯ್‌ ರಾವುತ್ ಹೇಳಿದ್ದಾರೆ.

‘ಈ ಕುರಿತಂತೆ ನಾನು ಈಗಾಗಲೇ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್ ಅವರೊಂದಿಗೂ ಚರ್ಚಿಸಿದ್ದೇನೆ. ಕಾಂಗ್ರೆಸ್‌ ಪಕ್ಷ ಇಂತಹ ಮೈತ್ರಿಕೂಟದ ಕೇಂದ್ರವಾಗಿರುತ್ತದೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

’ದೇಶದಲ್ಲಿ ಈಗ ವಿರೋಧಪಕ್ಷಗಳ ಪ್ರಬಲ ಮೈತ್ರಿಕೂಟದ ಅಗತ್ಯವಿದೆ. ಕಾಂಗ್ರೆಸ್‌ ಪಕ್ಷದ ಪಾಲ್ಗೊಳ್ಳುವಿಕೆ ಇಲ್ಲದೇ ಇದು ಸಾಕಾರವಾಗದು. ಆ ಪಕ್ಷವು ಉದ್ದೇಶಿತ ಮೈತ್ರಿಕೂಟದ ಜೀವವಾಗಿರುತ್ತದೆ. ನಾಯಕತ್ವದ ವಿಷಯವನ್ನು ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ‘ ಎಂದು ರಾವುತ್‌ ಅವರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು