ಪಟ್ನಾ: ಕಳೆದ ವಾರ ದೆಹಲಿಯ ನಮ್ಮ ನಿವಾಸದ ಮೇಲೆ ದಾಳಿ ಮಾಡಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೇವಲ ಅರ್ಧ ಗಂಟೆಯಲ್ಲಿ ಶೋಧನೆ ಪೂರ್ಣಗೊಳಿಸಿದ್ದರು. ಆದರೂ, ಮೇಲಿನಿಂದ ಆದೇಶ ಬರುವುದನ್ನೇ ಕಾಯುತ್ತಿದ್ದ ಅಧಿಕಾರಿಗಳು ಗಂಟೆ ಗಟ್ಟಲೆ ನಿವಾಸದಲ್ಲೇ ಉಳಿದಿದ್ದರು ಎಂದು ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಸೋಮವಾರ ಆರೋಪಿಸಿದ್ದಾರೆ.

ವಿಧಾನಸಭೆಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಯಾದವ್, ದಾಳಿ ವೇಳೆ ₹600 ಕೋಟಿ ಪತ್ತೆಯಾಗಿದೆ ಎಂಬ ಇ.ಡಿಯ ಹೇಳಿಕೆಯನ್ನು ಅಲ್ಲಗಳೆದರು.

ಇದನ್ನೂ ಓದಿ: ಲಾಲು ಮತ್ತು ಅವರ ಕುಟುಂಬದ ₹600 ಕೋಟಿ ಅಕ್ರಮ ವಹಿವಾಟು ಪತ್ತೆ: ಇ.ಡಿ

ನನ್ನ ಸೋದರಿಯರು ಮತ್ತು ಭಾವಂದಿರು ಧರಿಸಿದ್ದ ಆಭರಣಗಳನ್ನು ಬಿಚ್ಚಿಸಿದ ಇ.ಡಿ ಅಧಿಕಾರಿಗಳು, ಅವುಗಳ ಚಿತ್ರ ತೆಗೆದು, ವಶಕ್ಕೆ ಪಡೆದ ಆಭರಣ ಎಂದು ಹೇಳಿಕೊಂಡಿದ್ದಾರೆ ಎಂದು ದೂರಿದರು.

‘ನಾವು ಬಿಜೆಪಿ-ಆರ್‌ಎಸ್‌ಎಸ್‌ನಂತೆ ರಾಜಕೀಯ ವಿಜ್ಞಾನದ ವಿದ್ಯಾರ್ಥಿಗಳಲ್ಲ. ನಾವು ನೈಜ ರಾಜಕೀಯವನ್ನು ಮಾತ್ರ ಮಾಡುತ್ತೇವೆ. ಅವರನ್ನು ಎದುರಿಸಲು ಸಾರ್ವಜನಿಕ ಬೆಂಬಲವನ್ನು ಹೊಂದಿದ್ದೇವೆ. ಆದರೆ ಅವರು ನಿಜವಾದ ರಾಜಕೀಯ ರಣರಂಗದಿಂದ ಹೆದರಿ ಓಡಿ ಹೋಗುತ್ತಿದ್ದಾರೆ’ ಎಂದು ತೇಜಸ್ವಿ ವ್ಯಂಗ್ಯವಾಡಿದ್ದಾರೆ.

ಪಂಚನಾಮೆ ಬಗ್ಗೆ ಇ.ಡಿ ಅಧಿಕಾರಿಗಳು ಮಾಹಿತಿ ಬಹಿರಂಗಪಡಿಸಬೇಕು. ಇಲ್ಲವೇ ನಾನೇ ಅದರ ಮಾಹಿತಿ ಬಿಡುಗಡೆ ಮಾಡುತ್ತೇನೆ ಎಂದು ತೇಜಸ್ವಿ ಹೇಳಿರುವುದಾಗಿ ಸುದ್ದಿ ಸಂಸ್ಥೆ ಐಎಎನ್‌ಎಸ್ ವರದಿ ಮಾಡಿದೆ.

ಇವುಗಳನ್ನೂ ಓದಿ

ಇ.ಡಿ ಪಬ್ಲಿಕ್ ಪ್ರಾಸಿಕ್ಯೂಟರ್ ನಿತೇಶ್ ರಾಣಾ ರಾಜೀನಾಮೆ

ತೇಜಸ್ವಿ ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.