ಶನಿವಾರ, ಮಾರ್ಚ್ 25, 2023
27 °C

'ಇದು ನಿಮ್ಮ ಹಿಂದುತ್ವವೇ': ಮಹಾರಾಷ್ಟ್ರ ರಾಜ್ಯಪಾಲರಿಗೆ ಉದ್ಧವ್ ಠಾಕ್ರೆ ಪ್ರಶ್ನೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ವಾಗ್ದಾಳಿ ದಸರಾ ದಿನದಂದೂ ಮುಂದುವರಿದಿದೆ. ಭಗತ್ ಸಿಂಗ್ ಕೋಶಿಯಾರಿ ಅವರ ವಿಜಯದಶಮಿ ಭಾಷಣಕ್ಕೆ ಪ್ರತಿಕ್ರಿಯಿಸಿರುವ ಉದ್ಧವ್ ಠಾಕ್ರೆ ಅವರು, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಭಾಷಣವನ್ನು ಅನುಸರಿಸಲು ಸಲಹೆ ನೀಡಿದ್ದಾರೆ.

'ನಾವಿನ್ನು ದೇವಾಲಯಗಳನ್ನು ತೆರೆಯದ ಕಾರಣ ಹಿಂದುತ್ವದ ಬಗ್ಗೆ ನಮಗೆ ಪ್ರಶ್ನೆಗಳನ್ನು ಕೇಳಲಾಗುತ್ತಿದೆ' ಎಂದು ರಾಜ್ಯಪಾಲರನ್ನು ಹೆಸರಿಸದೆ ವಾಗ್ದಾಳಿ ನಡೆಸಿದರು.

'ನೀವು ನಮ್ಮ ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದೀರಿ. ಹಾಗಾಗಿ ಮಹಾರಾಷ್ಟ್ರದಲ್ಲಿ ನೀವು ಗೋಮಾಂಸವನ್ನು ನಿಷೇಧಿಸುತ್ತಿದ್ದೀರಿ, ಆದರೆ ಗೋವಾದಲ್ಲಿ ಗೋಮಾಂಸಕ್ಕೆ ನಿಮಗೆ ಸಹಮತವಿದೆ. ಇದು ನಿಮ್ಮ ಹಿಂದುತ್ವವೇ? ಬಿಜೆಪಿಯು ದ್ವಿಮುಖ ನೀತಿಯನ್ನು ಅನುಸರಿಸುತ್ತಿದೆ ಎಂದು ಭಾರಿ ಟೀಕೆಗೊಳಗಾಗಿರುವ ವಿವಾದಾತ್ಮಕ ವಿಚಾರವನ್ನಿಟ್ಟುಕೊಂಡು ಠಾಕ್ರೆ ರಾಜ್ಯಪಾಲರ ವಿರುದ್ಧ ಕಿಡಿಕಾರಿದ್ದಾರೆ.

'ಮೋಹನ್ ಭಾಗವತ್ ಅವರು, ಹಿಂದುತ್ವವು ಕೇವಲ ಪೂಜೆಗಳೊಂದಿಗೆ ಮಾತ್ರ ಸಂಬಂಧ ಹೊಂದಿಲ್ಲ ಎಂದಿದ್ದಾರೆ. ಆದ್ದರಿಂದ ಕಪ್ಪು ಟೋಪಿ ಧರಿಸುವ ಜನರು, ನಮ್ಮ ನಂಬಿಕೆಗಳನ್ನು ಪ್ರಶ್ನಿಸುವ ಮತ್ತು ನಮ್ಮನ್ನು ಜಾತ್ಯತೀತ ಎಂದು ಕರೆದುಕೊಳ್ಳುವವರು ಇಂದು ಭಾಗವತ್ ಅವರ ಭಾಷಣವನ್ನು ಕೇಳಬೇಕು' ಎಂದು ಠಾಕ್ರೆ ಒತ್ತಾಯಿಸಿದ್ದಾರೆ.

'ಭಾಗವತ್ ಅವರನ್ನು ನಂಬುವ ಮತ್ತು ಅನುಕರಣೆ ಮಾಡುವ ಜನರು (ಕೋಶಿಯಾರಿ), ಕಪ್ಪು ಟೋಪಿ ಧರಿಸಿ. ನಿಮಗೆ ಅದರ ಕೆಳಗೆ ಮಿದುಳು ಇದ್ದರೆ, ಕನಿಷ್ಠ ಅವರನ್ನು (ಮೋಹನ್ ಭಾಗವತ್) ಮತ್ತು ಅವರ ಹೇಳಿಕೆಗಳನ್ನು ಇಂದು ಅನುಸರಿಸಿ ಎಂದು ಅವರು ತಿಳಿಸಿದ್ದಾರೆ.

ತಮ್ಮ ವಿಜಯದಶಮಿ ಭಾಷಣದಲ್ಲಿ ತಪ್ಪು ಕಲ್ಪನೆಗಳ ಕುರಿತು ಮಾತನಾಡಿದ ಭಾಗವತ್, ಹಿಂದುತ್ವದ ಅರ್ಥಕ್ಕೆ ಒಂದು ಆಚರಣೆಯನ್ನು ಸೇರಿಸುವ ಮೂಲಕ ವಿರೂಪಗೊಳಿಸಿದ್ದಾರೆ ಎಂದು ಹೇಳಿದ್ದಾರೆ.

ಈ ತಪ್ಪು ಕಲ್ಪನೆಯನ್ನು ಉಲ್ಲೇಖಿಸಲು ಸಂಘ ಅದನ್ನು ಬಳಸುವುದಿಲ್ಲ. ನಮಗಿದು ಅದರ ಆಧ್ಯಾತ್ಮಿಕತೆ ಆಧಾರಿತ ಸಂಪ್ರದಾಯಗಳ ನಿರಂತರತೆ ಮತ್ತು ಭಾರತ ಭೂಮಿಯಲ್ಲಿನ ಮೌಲ್ಯ ವ್ಯವಸ್ಥೆಯ ಸಂಪೂರ್ಣ ಸಂಪತ್ತಿನೊಂದಿಗೆ ನಮ್ಮ ಗುರುತನ್ನು ವ್ಯಕ್ತಪಡಿಸುವ ಪದವಾಗಿದೆ ಎಂದು ಠಾಕ್ರೆ ತಿಳಿಸಿದ್ದಾರೆ.

ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಮುಚ್ಚಲಾಗಿದ್ದ ದೇಗುಲಗಳನ್ನು ಪೂಜೆಗೆ ಮುಕ್ತಗೊಳಿಸುವ ವಿಚಾರವಾಗಿ ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿತ್ತು. ಕೋಶಿಯಾರಿ ಅವರು ವ್ಯಂಗ್ಯವಾಗಿ, ಠಾಕ್ರೆ ಅವರೀಗ 'ಜಾತ್ಯತೀತರಾಗಿ' ಬದಲಾಗಿದ್ದಾರೆಯೇ ಎಂದು ಪ್ರಶ್ನಿಸಿದ್ದರು. ರಾಜ್ಯದಲ್ಲಿ ಬಾರ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಕಡಲತೀರಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಆದರೆ ನಮ್ಮ ದೇವರು ಮತ್ತು ದೇವತೆಗಳನ್ನು ಇನ್ನೂ ಲಾಕ್‌ಡೌನ್‌ನಲ್ಲಿಟ್ಟಿರುವುದು ವಿಪರ್ಯಾಸ ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಠಾಕ್ರೆ, ನನಗೆ ಯಾರಿಂದಲೂ ಹಿಂದುತ್ವ ಪ್ರಮಾಣಪತ್ರದ ಅಗತ್ಯವಿಲ್ಲ ಮತ್ತು ಈ ವಿಚಾರದ ಬಗ್ಗೆ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು