ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಪೊಲೀಸರ ದಕ್ಷತೆ ಪ್ರಶ್ನಿಸುವವರಿಗೆ ಅದರ ಇತಿಹಾಸ ತಿಳಿದಿಲ್ಲ: ಸಂಜಯ್ ರಾವುತ್

Last Updated 10 ಆಗಸ್ಟ್ 2020, 15:46 IST
ಅಕ್ಷರ ಗಾತ್ರ

ಮುಂಬೈ: ಮುಂಬೈ ಪೊಲೀಸರ ದಕ್ಷತೆಯನ್ನು ಪ್ರಶ್ನಿಸುವವರಿಗೆ ಅದರ ಇತಿಹಾಸ ತಿಳಿದಿಲ್ಲ ಎಂದು ಶಿವಸೇನಾಮುಖಂಡ ಸಂಜಯ್ ರಾವುತ್ ಸೋಮವಾರ ಹೇಳಿದ್ದಾರೆ.

ಈ ಕುರಿತು ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಮುಂಬೈ ಪೊಲೀಸರ ದಕ್ಷತೆಯನ್ನು ಪ್ರಶ್ನಿಸುವವರಿಗೆ ಅದರ ಇತಿಹಾಸ ತಿಳಿದಿಲ್ಲ. ಈ ಬಲವು ಬ್ರಿಟಿಷ್ ಆಳ್ವಿಕೆಯ ಕಾಲದಿಂದಲೂ ಅಸ್ತಿತ್ವದಲ್ಲಿದೆ ಮತ್ತು ಬಹಳ ವೃತ್ತಿಪರವಾಗಿದೆ. ಅವರು ಕ್ರಿಮಿನಲ್ ಹಿನ್ನೆಲೆಯುಳ್ಳ ಯಾರೊಂದಿಗೂ ಒಡನಾಟವಿಟ್ಟುಕೊಂಡಿಲ್ಲ ಎಂದಿದ್ದಾರೆ.

ಮುಂಬೈ ಪೊಲೀಸರು ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ತನಿಖೆ ಕೈಗೊಂಡಿರುವಾಗ ಬಿಹಾರದಲ್ಲಿ ಎಫ್‌ಐಆರ್ ದಾಖಲಿಸುವ ಅಗತ್ಯವೇನಿದೆ ಎಂದು ಪ್ರಶ್ನಿಸಿರುವ ರಾವುತ್, ಸಿಬಿಐ
ಸಿಬಿಐ ಎಫ್ಐಆರ್ ದಾಖಲಿಸಿದೆ. ಅದು ಅವರ ಅಸಹಾಯಕತೆ. ಸಿಬಿಐ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತದೆ ಮತ್ತು ಕೇಂದ್ರ ಸರ್ಕಾರವು ತನ್ನದೇ ಆದ ಅಸಹಾಯಕತೆಯನ್ನು ಹೊಂದಿದೆ. ಬಿಹಾರ ಸರ್ಕಾರಕ್ಕೆ ಸಂಬಂಧವಿಲ್ಲದಿದ್ದರೂ ಕೂಡ ಸರ್ಕಾರವು ಸಿಬಿಐ ತನಿಖೆಗೆ ಮನವಿ ಮಾಡಿದೆ ಎಂದಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ತನಿಖೆಯನ್ನು ಮುಂಬೈ ಪೊಲೀಸರು ನಡೆಸುತ್ತಿದ್ದಾರೆ ಮತ್ತು ತನಿಖೆಯು ಇನ್ನೂ ಮುಗಿದಿಲ್ಲ. ಆದರೆ ಬಿಹಾರದಲ್ಲಿ ಎಫ್‌ಐಆರ್‌ ದಾಖಲಿಸುವ ಅವಶ್ಯಕತೆ ಏನು? ಪೊಲೀಸರಲ್ಲಿ ನಂಬಿಕೆ ಇಡಿ. ಮುಂಬೈ ಅಥವಾ ಬಿಹಾರವೇ ಆಗಿರಲಿ ಪೊಲೀಸರು ಪೊಲೀಸರೆ ಎಂದಿದ್ದಾರೆ.

ನಾವು ಯಾರ ಮೇಲೆ ಎಫ್‌ಐಆರ್ ದಾಖಲಿಸಿದ್ದೇವೆಯೋ ಆ ತನಿಖೆ ಮೊದಲು ಸಂಪೂರ್ಣವಾಗಲಿ. ಯಾರಿಗಾದರೂ ಅನ್ಯಾಯವಾದರೆ ಅದು ಬಿಹಾರದಲ್ಲೇ ಆಗಲಿ ಹೊರತು ಮಹಾರಾಷ್ಟ್ರದಲ್ಲಲ್ಲ. ಬಾಲಿವುಡ್ ಉದ್ಯಮದಲ್ಲಿ ಕಪ್ಪು ಹಣವನ್ನು ಬಳಸಲಾಗುತ್ತದೆ ಎಂದು ಸಂಸತ್ತಿನಲ್ಲಿ ಬಗ್ಗೆ ಮಾತನಾಡುವವರು, ಸುಶಾಂತ್ ಸಿಂಗ್ ರಜಪೂತ್ ಕೂಡ ಕಪ್ಪು ಹಣದ ಮೇಲೆ ವಾಸಿಸುತ್ತಿದ್ದರೇ? ನೀವು ಚುನಾವಣೆಗೆ ಹೇಗೆ ಹೋರಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT