ಗುರುವಾರ , ಆಗಸ್ಟ್ 11, 2022
27 °C

ಪೊಲೀಸ್ ಜೊತೆ ಅಶ್ಲೀಲ ವಿಡಿಯೊ ಮಾಡಿ ಹಣಕ್ಕಾಗಿ ಪೀಡಿಸಿದ್ದ ಮೂವರು ಮಹಿಳೆಯರು ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೈಪುರ: ಹೆಡ್‌ಕಾನ್‌ಸ್ಟೆಬಲ್ ಒಬ್ಬರನ್ನು ಮನೆಗೆ ಕರೆಸಿ ಅವರ ಜೊತೆ ಲೈಂಗಿಕ ಸಂಬಂಧ ಬೆಳೆಸಿ ಅಶ್ಲೀಲ ವಿಡಿಯೊ ಮಾಡಿ ಹಣಕ್ಕಾಗಿ ಪೀಡಿಸುತ್ತಿದ್ದ ಮೂವರು ಮಹಿಳೆಯರನ್ನು  ಪೊಲೀಸರು ಬಂಧಿಸಿದ್ದಾರೆ.

ವಿಡಿಯೊ ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡುತ್ತಿದ್ದ ಮಹಿಳೆಯರು ₹ 4 ಲಕ್ಷ ನೀಡುವಂತೆ ಪೇದೆಯನ್ನು ಪೀಡಿಸುತ್ತಿದ್ದರು ಎಂದು ಕರಣ್‌ಪುರ್ ಸರ್ಕಲ್ ಇನ್ಸ್‌ಪೆಕ್ಟರ್ ಸುರೇಂದ್ರ ಸಿಂಗ್ ಹೇಳಿದ್ದಾರೆ.

ಹಳ್ಳಿಯೊಂದರಿಂದ ಸುಖ್‌ಪ್ರೀತ್ ಕೌರ್ ಎಂಬ ಮಹಿಳೆ ಕರೆ ಮಾಡಿ ತಮ್ಮ ಮನೆಯ ಹುಡುಗಿಯೊಬ್ಬಳು ಕಾಣೆಯಾಗಿರುವುದಾಗಿ ಹೇಳಿದ್ದರು. ಬಳಿಕ, ಪರಿಶೀಲನೆಗೆ ಮಹಿಳೆಯ ಮನೆಗೆ ತೆರಳಿದಾಗ ಆಕೆ ಮತ್ತು ಇನ್ನಿಬ್ಬರು ಮಹಿಳೆಯರು ನನ್ನನ್ನು ಮೋಹಿಸಿ ಲೈಂಗಿಕ ಸಂಪರ್ಕದ ಅಶ್ಲೀಲ ವಿಡಿಯೊ ಮಾಡಿದರು ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.

ಬಳಿಕ, ಸುಖ್‌ಪ್ರೀತ್ ಸಿಂಗ್ ₹ 4 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದರೆ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಕಾನ್‌ಸ್ಟೆಬಲ್ ಹೇಳಿದ್ದಾರೆ.

ಬಂಧಿತ, ಉಳಿದ ಇಬ್ಬರು ಮಹಿಳೆಯರನ್ನು ವಿಮಲಾ, ಪಂಜಲ್ ಶರ್ಮಾ ಎಂದು ಗುರುತಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು